ವಿಜಯ ಸಂಘರ್ಷ ನ್ಯೂಸ್
ತೀರ್ಥಹಳ್ಳಿ: ಬೆಂಗಳೂರು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಎಸ್.ಸಿ.ವಿಭಾಗದ ಕಾಂಗ್ರೆಸ್ ವಕ್ತಾರ ಪಡುವಳ್ಳಿ ಹರ್ಷೇಂದ್ರ ಕುಮಾರ್ ಆಗ್ರಹಿಸಿದರು.
ಗುತ್ತಿಗೆದಾರ ಚೆಲುವರಾಜ್ ರವರಿಗೆ ಜಾತಿನಿಂದನೆ ಮಾಡಿ ಅಸಹ್ಯ ಹಾಗೂ ಅವಾಚ್ಯವಾಗಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ನಿರ್ದಾಕ್ಷಣವಾಗಿ ಕ್ರಮ ಜರುಗಿಸಬೇಕೆಂದು ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ ಮನಬಂದಂತೆ ನಿಂದಿಸಿರುತ್ತಾರೆ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೆ ಅವರದೇ ಬಿಜೆಪಿ ಪಕ್ಷದ ಎಸ್ ಸಿ ಮೋರ್ಚಾದ ರಾಜ್ಯಾಧ್ಯಕ್ಷ ಚೆಲುವಾದಿ ನಾರಾಯಣಸ್ವಾಮಿ ಈ ಕೃತ್ಯ ಖಂಡಿಸದೆ ಇರುವುದು ನಾಚಿಕೆಗೇಡು ಸಂಗಾತಿ, ಹಾಗಾಗಿ ಅವರು ಸಹ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಎಸ್ ಸಿ ವಿಭಾಗದ ವಕ್ತಾರ ಪಡುವಳ್ಳಿ ಹರ್ಷೇಂದ್ರ ಕುಮಾರ್ ಆಗ್ರಹಿಸಿದ್ದಾರೆ.
DJ Halli ದಲಿತ ಶಾಸಕರ ಮನೆಗೆ ಬೆಂಕಿ.. ವಾಲ್ಮೀಕಿ ಹಗರಣದಲ್ಲಿ ದಲಿತ ನಿಷ್ಚಂವಂತ ಚಂದ್ರಶೇಖರ್ ಆತ್ಮಹತ್ಯೆ. ಉತ್ತರ ಕರ್ನಾಟಕದ ದಲಿತ ನಿಷ್ಟಾವಂತ PSI Suicide ಈ ಯಾವುದೇ ಸಂಘನೆ ಮುಂದೆ ಏಕೆ ಪ್ರತಿಭಟನೆ ಮಾಡಲಿಲ್ಲ
ಪ್ರತ್ಯುತ್ತರಅಳಿಸಿದಯವಿಟ್ಟು ತಿಳಿಸುವಂತೆ ವಿನಂತಿ