ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ, 3 ಸಾವಿರ ಸಸಿ ನೆಟ್ಟು ಪೋಷಿಸಿದ ಹಸಿರು ಸೇನಾನಿ, 40 ಕ್ಕೂ ಹೆಚ್ಚು ಬಾರಿ ಸ್ವಯಂ ರಕ್ತದಾನ ಶಿಬಿರ ಗಳನ್ನು ಆಯೋಜನೆ ಮಾಡುವ ಮೂಲಕ ರಕ್ತದಾನದ ಮಹತ್ವ ಸಾರುತ್ತಿರುವ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲೇಶಪ್ಪ ಅವರ ಗಣನೀಯ ಸೇವೆಯೆ ಅತ್ಯುತ್ತಮ.
ಜಿಲ್ಲೆಯ ವಿವಿಧೆಡೆ ಅವರ ಸಾಧನೆಯ ಸಮಾಜಸೇವೆ ಪರಿಗಣಿಸಿರುವ ಬೆಂಗಳೂರಿನ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿ ಮ್ಯೂಸಿಕ್ ಆಕಾಡೆಮಿಯು ಸೆ: 22ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ವಿಶೇಷ ಸಮಾರಂಭದಲ್ಲಿ ಪಂಡಿತ್ ಗಾನಯೋಗಿ ಪುಟ್ಟರಾಜ ಸನ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸಂಬಂಧ ಸ್ವತಃ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಹಾಲೇಶಪ್ಪ, ರಕ್ತದಾನ ಹಾಗೂ ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿ ಉಳಿಸುವ ಕಾನೂನು ಹೋರಾಟಗಳಲ್ಲಿ ನಾನು ಈವರೆಗೆ ಸಲ್ಲಿಸಿರುವ ಅಳಿಲು ಸೇವೆಯನ್ನು ಗುರುತಿಸಿ ಬೆಂಗಳೂರಿನ ಪಂಡಿತ್ ಪುಟ್ಟರಾಜು ಗವಾಯಿ ಸಂಗೀತ ಅಕಾಡೆಮಿಯು ಸೆ.22ರಂದು ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರ ದಲ್ಲಿ ಪಂಡಿತ್ ಪುಟ್ಟರಾಜು ಗವಾಯಿ ಸಮ್ಮಾನ್ 2024 ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ನಾನಾ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ರಾಜ್ಯದ 6 ಜನರಿಗೆ ಪ್ರಶಸ್ತಿ ನೀಡಲಿದ್ದು, ಅದರಲ್ಲಿ ತಾವು ಸಹ ಒಬ್ಬರು ಎಂಬುದು ಸಂತಸದ ವಿಚಾರ. ಸಾಧಕರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳು ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ.
ನನ್ನ ಸಾಮಾಜಿಕ ಸೇವೆಯನ್ನು ಮುಂದು ವರೆಸಲು ಪ್ರೋತ್ಸಾಹ ಹಾಗೂ ಸಹಕಾರವೇ ಕಾರಣ ಎಂದು ಹೇಳಲು ಹೆಮ್ಮೆಪಡುತ್ತೇನೆ. ಪ್ರಶಸ್ತಿಯನ್ನು ಸ್ವೀಕರಿಸಲು ನಿಮ್ಮೆಲ್ಲರ ಪ್ರತಿನಿಧಿಯಾಗಿ ಹೋಗಲು ಇಚ್ಚಿಸುತ್ತೇನೆ. ನಾನು ನೆಪಮಾತ್ರ. ಈ ಪ್ರಶಸ್ತಿ ಎಲ್ಲಾ ರಕ್ತದಾನಿಗಳಿಗೆ ಹಾಗೂ ಪರಿಸರ ಹೋರಾಟ ಗಾರರಿಗೆ ಅರ್ಪಣೆ. ಎಂದಿನಂತೆ ಮುಂದೆಯೂ ಕೂಡ ನಿಮ್ಮ ಬೆಂಬಲ ಪ್ರೋತ್ಸಾಹ ಸಹಕಾರ ಸದಾ ಸಿಗಲಿ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಂಗ್ರಾಜುಲೇಷನ್ ಸರ್. ಯಾರಿಗೂ ಆಡಂಬರದ ರೀತಿಯಲ್ಲಿ ತೋರ್ಪಡಿಸದೆ ಸಾಧನೆಯನ್ನು ಮಾಡಿರುತೀರಿ ಸರ್ ಇನ್ನಷ್ಟು ಪ್ರಶಸ್ತಿಗಳು ತಮಗೆ ಸಿಗುವಂತಾಗಲಿ. ಹಾಲೇಶಪ್ಪ ಸರ್ ಅವರಿಗೆ ಮತ್ತೊಮ್ಮೆ ಕಂಗ್ರಾಟ್ಸ್ ಸರ್
ಪ್ರತ್ಯುತ್ತರಅಳಿಸಿ