ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ : ರಕ್ತದಾನ ಶ್ರೇಷ್ಠದಾನ. ನಾನು ಕೂಡ ಅನೇಕ ಬಾರಿ ರಕ್ತದಾನ ಮಾಡಿದ್ದೇನೆ. ಅಪಘಾತವಾದಂತಹ ಸಂದರ್ಭದಲ್ಲಿ ತುಂಬಾ ಸಲ ರಕ್ತದ ಕೊರತೆ ನೋಡಿದ್ದೇವೆ. ಇನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಕ್ತದಾನಿ ಗಳು ಮುಂದೆ ಬರಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಹೇಳಿದರು.
ಕೆ.ಆರ್.ಪುರಂ ಯುವಕರ ಸೇವಾ ಸಂಘ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಜೊತೆಯಾಗಿ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದಕ್ಕೆ ಮತ್ತು ಕೆ.ಆರ್.ಪುರಂ ಯುವಕರ ಸೇವಾ ಸಂಘ ಕಾರ್ಯವನ್ನು ಪ್ರಶಂಶಿಸಿದರು.
ರೋಟರಿ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ರಕ್ತದಾನ ಜೀವದಾನ, ಶ್ರೇಷ್ಠದಾನ, ರಕ್ತವನ್ನು ಕೃತಕವಾಗಿ ಮಾಡಲು ಸಾಧ್ಯವಿಲ್ಲ. ದಾನಿಗಳಿಂದಲೇ ಪಡೆದು ಬಳಸಬೇಕು. ಇಂದಿಗೂ ನಮ್ಮಲ್ಲಿ ರಕ್ತದ ಕೊರತೆ ಇದೆ. ಇನ್ನು ಹೆಚ್ಚು ಹೆಚ್ಚು ಇತರ ಶಿಬಿರಗಳನ್ನು ಮಾಡಬೇಕು ಎಂದು ತಿಳಿಸಿದರು.
ಹಾಗೆಯೇ ಕೆ.ಆರ್.ಪುರಂ ಯುವಕರ ಸಂಘದವರ ಸೇವೆಯನ್ನು ಶಾಂಗ್ಲಿಸಿದರು, ಇವರು ಸತತವಾಗಿ 12 ವರ್ಷದಿಂದ ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಕೆ.ಆರ್.ಪುರಂ ಯುವಕರ ಸಂಘದ ಅಧ್ಯಕ್ಷ ಪ್ರಕಾಶ್, ಸುಂದರ್, ಗಣೇಶ್, ಶರವಣ, ಪ್ರದೀಪ್ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ಪ್ರಸಂಶನೀಯ. ನಿಮ್ಮ ಜೊತೆ ಎಲ್ಲಾ ಸೇವಾಕಾರ್ಯಗಳಲ್ಲೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಮ್ಮ ಜೊತೆಗಿರುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಫಾಸ್ಟ್ ಅಸಿಸ್ಟೆಂಟ್ ಗೌರ್ನರ್ ರವಿಕೂಟಜಿ ಅವರು ರಕ್ತದಾನ ಮಾಡಿದರು. ಹಾಗೆಯೇ ಹಾನೆಟ್ ಸುಮುಕ್ ಜಗದೀಶ್ ಪ್ರಥಮ ಬಾರಿಗೆ ರಕ್ತದಾನ ಮಾಡಿದರು. ಸುಮಾರು 30ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ನ ಕಾರ್ಯದರ್ಶಿ ಈಶ್ವರ್, ಖಜಾಂಚಿ ಬಸವರಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಸಂತೋಷ್, ಗಿರೀಶ್ ಬಲರಾಮ್, ಧರ್ಮೇಂದ್ರ ಸಿಂಗ್ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್, ಕಾರ್ಯದರ್ಶಿಯ ಶುಭ ಚಿದಾನಂದ್ ಉಪಸಿತರಿದ್ದರು.
Tags:
ಶಿವಮೊಗ್ಗ ಸುದ್ದಿ