ವಿಜಯ ಸಂಘರ್ಷ ನ್ಯೂಸ್
ಚನ್ನಗಿರಿ: ತಾಲೂಕಿನ ಭಗೀರಥ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ದೇವರಹಳ್ಳಿ ಗ್ರಾಮದ ಉಪ್ಪಾರ ಸಮಾಜದ ಸಂಯುಕ್ತಾಶ್ರ ಯದಲ್ಲಿ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ತಾಲ್ಲೂಕಿನ ಶ್ರೀ ಲಕ್ಷ್ಮೀ ರಂಗನಾಥ ಕಲ್ಯಾಣ ಮಂಟಪ ಶ್ರೀ ಕ್ಷೇತ್ರ ದೇವರಹಳ್ಳಿಯಲ್ಲಿ ಸೆ:15 ರಂದು 2022-23 ಮತ್ತು 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ, ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ವರಿಗೆ ಸನ್ಮಾನ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು, ಉನ್ನತ ವಿದ್ಯಾಭ್ಯಾಸ ಮಾಡಿದ ವಿಶೇಷ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು.
ಪೂಜ್ಯ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ಶೈಲಜಾ ಎ.ಎಸ್. ಗೋಪಾಲ್, ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುದೇವ್ ಎಸ್.ಎಂ. ಇವರುಗಳು ಉಪನ್ಯಾಸ ನೀಡಲಿದ್ದಾರೆ. ಈಶ್ವರ್ ಎಂ.ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ದೇವರಹಳ್ಳಿ ಗ್ರಾಪಂ, ಸಮಾಜದ ಮುಖಂಡರು ಹಾಗೂ ತಾಲೂಕಿ ನಲ್ಲಿಯೇ ಅತೀ ಹೆಚ್ಚು ನೌಕರರಿರುವ ದೇವರಹಳ್ಳಿ ನೌಕರರು ಮತ್ತು ಗ್ರಾಮಸ್ಥರ ನೆರವಿನೊಂದಿಗೆ ಕಾರ್ಯಕ್ರಮ ನಡೆಯಲಿದೆ.
ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಬಸವರಾಜಪ್ಪ ಎ.ಎಸ್. ಮತ್ತು ಉಪಾಧ್ಯಕ್ಷ ಶ್ರೀನಿವಾಸ್ ಭಾಗವಹಿಸ ಲಿದ್ದಾರೆ. ಚನ್ನಗಿರಿ ತಾಲೂಕು ಭಗೀರಥ ಉಪ್ಪಾರ ನೌಕರರ ಸಂಘ ಹಾಗೂ ದೇವರಹಳ್ಳಿ ನೌಕರ ಬಂಧುಗಳು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
Tags
ಚನ್ನಗಿರಿ ಸುದ್ದಿ