ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ರೈತರು ಸಹಕಾರಿ ತತ್ವ ಮೈಗೂಡಿಸಿಕೊಂಡು ಗುಣಮಟ್ಟದ ಹಾಲು ಉತ್ಪಾದಿಸಿದರೆ ಮಾತ್ರ ಸಹಕಾರಿ ಸಂಘಗಳು ಸದೃಢವಾಗಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ತಾಲೂಕಿನ ಕೈಗೊನಹಳ್ಳಿ, ಕತ್ತರಘಟ್ಟ, ಚೌಡೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ 2023 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳಿಗೆ ಹಾಲು ಸರಬರಾಜು ಮಾಡಿದರೆ ಸಾಲದು, ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರ ಪ್ರಮುಖ ಮಾಹಿತಿಗಳನ್ನು ಪಡೆಯಬೇಕು. ಪ್ರತಿಯೊಬ್ಬ ರೈತರು ತಮ್ಮ ಪಶು ಸಾಕಾಣಿಕೆಯಲ್ಲಿ ನೀಡುವ ಆಹಾರದ ಬಗ್ಗೆ ಬಹಳ ಎಚ್ಚರಿಕೆಯ ಕ್ರಮವನ್ನು ಅನುಸರಿಸಬೇಕು.ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಉತ್ಪಾದಕರಿಗೆ ಕಲ್ಯಾಣ ನಿಧಿ ಸ್ಥಾಪಿಸಿ, ಜನಶ್ರೀ ಬಿಮಾ ಯೋಜನೆಯಲ್ಲಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಪರಿಹಾರ ನೀಡುತ್ತಿದ್ದೇವೆ. ರಾಸುಗಳಿಗೆ ಒಕ್ಕೂಟವು
ಶೇ.50 ರಷ್ಟು ವಿಮಾ ಮೊತ್ತ ಪಾವತಿಸಿ ಮಿಕ್ಕ ಮೊತ್ತವನ್ನು ಸದಸ್ಯರೆ ಪಾವತಿಸಬೇಕಿದೆ ಎಂದು ಸಂಘದಿಂದ ದೊರೆಯಬಹುದಾದ ಸೌಲಭ್ಯಗಳ ಮಾಹಿತಿ ನೀಡಿದರು.
ಒಕ್ಕೂಟದಿಂದ ಸಿಗುವಂತಹ ಸೌಲಭ್ಯ ಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಹೈನು ಉದ್ಯಮವನ್ನು ಲಾಭದಾಯಕವಾಗಿ ಬಳಸಲು ಎಲ್ಲಾ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಸದಸ್ಯರಿಗೆ ನೀಡುತ್ತಾ ಒಕ್ಕೂಟ ರೈತರಿಗೆ ಸಹಕಾರ ನೀಡುತ್ತಾ ಬಂದಿದೆ ಎಂದರು.
ಸಘಗಳ ಮಾರ್ಗ ವಿಸ್ತರಣಾಧಿಕಾರಿಗಳು ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್ ಮಂಡಿಸಿದರು.
ಈ ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿ ಭಾವನ ಕೈಗೂನಹಳ್ಳಿ, ಸಂಘದ ಅಧ್ಯಕ್ಷೆ ಪಾರ್ವತಿ ವೀರಜೇಗೌಡ, ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಸುನಂದಮ್ಮ, ಜಯಮ್ಮ, ಸುಜಾತ,ಚಿಕ್ಕಮ್ಮ, ಶಶಿಕಲಾ, ವಿಜಯ,ಅಶ್ವಿನಿ, ಮೀನಾಕ್ಷಿ, ವರಲಕ್ಷ್ಮಿ, ಸಂಘದ ಕಾರ್ಯದರ್ಶಿ ಹೇಮಾವತಿ, ಚೌಡೇನಹಳ್ಳಿ ಸಂಘದ ಅಧ್ಯಕ್ಷೆ ರಾಧಾ ಚಂದ್ರೇಗೌಡ ಉಪಾಧ್ಯಕ್ಷೆ ಅನಿತಾ, ನಿರ್ದೇಶಕರಾದ ಲತಾ, ಶೋಭಾ,ಶಾಂತಮ್ಮ, ಪ್ರೇಮ, ಲಕ್ಷ್ಮಿದೇವಮ್ಮ,ಮಂಜುಳಾ, ಲಕ್ಷ್ಮಮ್ಮ, ಕಾರ್ಯದರ್ಶಿ ರಂಜಿತ ಸುರೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜು,ಕತ್ರರಘಟ್ಟ ಸಂಘದ ಅಧ್ಯಕ್ಷ ಜವರೇಗೌಡ ಉಪಾಧ್ಯಕ್ಷ ಶೇಖರ್, ನಿರ್ದೇಶಕರುಗಳಾದ ಸತೀಶ್, ಪುಟ್ಟಪ್ಪ,ಚಂದ್ರಹಾಸ, ಕುಮಾರ, ವಿಶ್ವನಾಥ,ಯೋಗೇಂದ್ರ, ಪ್ರಕಾಶ, ಸುಬ್ಬಮ್ಮ,ಪ್ರೇಮ, ಕಾರ್ಯದರ್ಶಿ ಕೆ.ವಿ ಚಂದ್ರಶೇಖರ್, ಗ್ರಾಮಸ್ಥರು ಸೇರಿದಂತೆ ಇತರರು ಭಾಗವಹಿಸಿದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ.ಆರ್. ಪೇಟೆ ವರದಿ