ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಗಾಂಧೀಜಿ ಅವರ ತತ್ವಾರ್ದಶಗಳು ಎಲ್ಲರಿಗೂ ಮಾರ್ಗ ದರ್ಶನ ಎಂದು ಯೋಗ ಗುರು ಚಂದ್ರ ಶೇಖರಯ್ಯ ಅಭಿಪ್ರಾಯಪಟ್ಟರು.
ಶಿವಗಂಗಾ ಯೋಗ ಕೇಂದ್ರದ ಕೃಷಿನಗರ ಶಾಖೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಆಚರಣೆಯಲ್ಲಿ ಮಾತನಾಡಿ, ರಾಷ್ಟ್ರಕ್ಕಾಗಿ ಸರ್ವಸ್ವ ವನ್ನು ತ್ಯಾಗ ಮಾಡಿ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯದ ಹೋರಾಟ ದಲ್ಲಿ ಭಾಗಿಯಾಗಿ ದ್ದರು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯುವಜನರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಪ್ರಾಮಾಣಿಕತೆ, ಸರಳ ಜೀವನಶೈಲಿ ಹಾಗೂ ದೂರದೃಷ್ಟಿಯ ಆಲೋಚನೆ ಗಳು ನಮಗೆಲ್ಲರಿಗೂ ದಾರಿದೀಪ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮಾತನಾಡಿ, ಗಾಂಧೀಜಿ ಅವರು ಕಂಡ ರಾಮ ರಾಜ್ಯ, ಸ್ವಚ್ಛತೆಯ ಬಗ್ಗೆ ನಾವೆಲ್ಲರೂ ಶ್ರಮಿಸಬೇಕು. ಎಲ್ಲ ದೇಶಗಳಿಗಿಂತ ನಮ್ಮ ದೇಶ ಬಹಳ ವ್ಯವಸ್ಥಿತವಾಗಿ ಭದ್ರತೆ ಹಾಗೂ ಸುರಕ್ಷತೆಯಿಂದ ಕೂಡಿದೆ. ಇಂದು ನಮ್ಮ ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸಬೇಕಿದೆ ಎಂದರು.
ಯೋಗ ಶಿಕ್ಷಕಿ ನಾಗರತ್ನಮ್ಮ ಚಂದ್ರಶೇಖರ್ ಲಾಲ್ ಬಹದ್ದೂರ್ ಶಾಸ್ತ್ರಿಜಿ ಕುರಿತು ಮಾತನಾಡಿದರು. ಗಾಂಧೀಜಿ ಅವರ ಭಜನೆ ಗಳನ್ನ ಹಾಡುತ್ತ ಎಲ್ಲರಿಗೂ ಹೇಳಿಕೊಟ್ಟರು. ಇದೇ ಸಂದರ್ಭದಲ್ಲಿ ಯೋಗ ಬಂಧುಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಯಂತಿ ಕಾರ್ಯಕ್ರಮದಲ್ಲಿ ಯೋಗ ಶಿಬಿರಾರ್ಥಿಗಳಾದ ಜಯಣ್ಣ ಕೃಷ್ಣಮೂರ್ತಿ, ಚಿದಾನಂದ, ಸುಜಾತಾ, ಬಿಂದು ವಿಜಯ ಕುಮಾರ್ ಮತ್ತು ಯೋಗ ಶಿಬಿರಾರ್ಥಿಗಳು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು. ವಿನೋದಾ, ಶೋಭಾ, ಗಣೇಶ, ಮಂಜುನಾಥ್, ಚಿದಾನಂದ ಮೂರ್ತಿ ಹಾಜರಿದ್ದರು.
Tags:
ಶಿವಮೊಗ್ಗ ಸುದ್ದಿ