ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಆರ್ಥಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಸಾಮಾಜಿಕವಾಗಿ, ಧಾರ್ಮಿಕ ವಾಗಿ ಮತ್ತು ಆರ್ಥಿಕವಾಗಿ ಜನರಿಗೆ ಧೈರ್ಯ ತುಂಬುವ ಕೆಲಸ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜನಜಾಗೃತಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ತಾಲೂಕು ಕಚೇರಿ ಯಲ್ಲಿ ಧನಲಕ್ಷ್ಮಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಧಾರ್ಮಿಕವಾಗಿ ಭಕ್ತಿ, ಭಾವನೆ ಜತೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ 
ಸ್ವ ಸಹಾಯ ಸಂಘಗಳ ಮೂಲಕ ಸಮಾಜಿಕವಾಗಿ ಜಾಗೃತಿ ಮೂಡಿಸು ತ್ತಿದೆ. ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಸಾಲ, ಸೌಲಭ್ಯಗಳ ಜತೆ ಸ್ವಂತ ಶಕ್ತಿಯ ಮೂಲಕ ಸ್ವಾವಲಂಬಿ ಜೀವನ ನಡೆಸಲು ಹತ್ತು ಹಲವು ಯೋಜನೆ ಗಳಿಂದ ಸುಂದರ ಸಂಸಾರಕ್ಕೆ ಮುನ್ನುಡಿ ಬರೆದಿದೆ.ರಾಜ್ಯದ ಉದ್ದಗಲಕ್ಕೂ ಬಡವ, ಬಲ್ಲಿದರಿಗೆ ಆರ್ಥಿಕವಾಗಿ ಸಾಲ, ಸೌಲಭ್ಯಗಳನ್ನು ನೀಡಿ ಸ್ವಾವಲಂಬಿ ಜೀವನ ನಡೆಸಲು ಸಹಕಾರ ಮಾಡುತ್ತಿರುವ ಏಕೈಕ ಸಂಘ ಸಂಸ್ಥೆ ಇದಾಗಿದ್ದು, ತಾಲೂಕಿನಲ್ಲಿ ಎಲ್ಲ ವರ್ಗಗಳ ಜನರಿಗೆ ಸ್ವ ಉದ್ಯೋಗ ಕಲ್ಪಿಸಲು ಆರ್ಥಿಕವಾಗಿ ಸಹಾಯ ಮಾಡಿ,ಹಣ ಉಳಿಕೆಯ ಮಾರ್ಗೋ ಪಾಯವನ್ನು ತಿಳಿಸಿ, ಕೌಟುಂಬಿಕವಾಗಿ ಸುಖಿ ಸಂಸಾರ ಸಾಗಿಸಲು ಮದ್ಯಪಾನ ಹಾಗೂ ದುಶ್ಚಟಗಳನ್ನು ದೂರ ಮಾಡಿ ಸಾಮಾಜಿಕವಾಗಿ ಜನರನ್ನು ಸುಸಂಸ್ಕೃ ತರನ್ನಾಗಿಸಲು ಸಂಸ್ಥೆ ಸೇವೆ ಮಾಡುತ್ತಿ ರುವುದು ಸಾರ್ಥಕ ಕಾರ್ಯ ಎಂದರು.

ಸಾಮಾಜಿಕವಾಗಿ ವ್ಯಕ್ತಿ ಕುಡಿತ ಸೇರಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಮದ್ಯವ್ಯರ್ಜನ ಶಿಬಿರಗಳ ಮೂಲಕ ಕುಡಿತ ಬಿಡಿಸಿ ಸುಖಿ ಸಂಸಾರಕ್ಕೆ ನಾಂದಿ ಹಾಡಿದೆ. ಗ್ರಾಮದ ಕೆರೆಗಳ ಹೂಳನ್ನು ತಗೆದು ಕೆರೆಯ ಮಹತ್ವ ತಿಳಿಸಿದೆ.ಕೃಷಿಗೆ ಪೂರಕವಾದ ಯೋಜನೆಗಳನ್ನು ಸ್ವ ಸಂಘಗಳನ್ನು ರಚಿಸುವ ಮೂಲಕ ಕೃಷಿ ಯಂತ್ರೋಪ ಕರಣಗಳನ್ನು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಜನರಿಗೆ ಶಕ್ತಿ ತುಂಬಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಮಾಜಿಕ ಕ್ರಾಂತಿಯನ್ನೆ ಮಾಡುತ್ತಿದೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾ ಅಧಿಕಾರಿ ತಿಲಕ್ ರಾಜ್,ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಕೆ.ಆರ್ ರಾಜೇಶ್, ಪದ್ಮಾವತಿ, ಜ್ಯೋತಿ,ಪುರಸಭಾ ಮಾಜಿ ಸದಸ್ಯ ಕೆ.ಆರ್ ನೀಲಕಂಠ, ಕಸಾಪ ಮಾಜಿ ಅಧ್ಯಕ್ಷ ಹರಿಚರಣ ತಿಲಕ್ ,ಹಿರಿಯ ಪತ್ರಕರ್ತರಾದ ಬಲ್ಲೆನಹಳ್ಳಿ ಮಂಜುನಾಥ್, ಗ್ರಾ.ಪಂ ಸದಸ್ಯ ಶ್ರೀನಿವಾಸ್ ಸಜ್ಜನ್, ಆರ್.ಎಸ್.ಎಸ್ ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅರುಣ್ ಕುಮಾರ್, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕು ಅಧ್ಯಕ್ಷ ಸತೀಶ್, ಹಿಂದುಳಿದ ವರದಿಗಾರರ ಸಂಘದ ಅಧ್ಯಕ್ಷ ರಾಜೇಶ್,ಶ್ರೀ ಧರ್ಮಸ್ಥಳ ಸಂಘದ ಮೇಲ್ವಿಚಾರಕರು, ಸೇವಾಪ್ರತಿ ನಿಧಿಗಳು ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು