ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ವತಿಯಿಂದ ಜಿಲ್ಲಾ ಕಾರ್ಯಾಲಯದಲ್ಲಿ ಸದಸ್ಯತ್ವ ಹೊಂದಿದ ಪತ್ರಕರ್ತರಿಗೆ ಶನಿವಾರ ಸಂಘದ ಕಚೇರಿ ಯಲ್ಲಿ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್ ಗುರುತಿನ ಚೀಟಿ ವಿತರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ ತಾರತಮ್ಯವಿಲ್ಲದೇ, ಬೇದಭಾವ ಇಲ್ಲದೇ,ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲಾ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ ಎಂದರು.
ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ. ಒಟ್ಟಾಗಿ ಪತ್ರಕರ್ತರ ಶ್ರೇಯೋಭಿವೃದ್ದಿ ಹಿತಕಾಯುವ ಕೆಲಸ ಮಾಡೋಣ ಪತ್ರಕರ್ತರ ಕಷ್ಟ ನಷ್ಟ ಗಳಿಗೆ ಸ್ಪಂದಿಸೋಣ ಎಂದರು.
ದಿನಪತ್ರಿಕೆ,ವಾರ, ಪಾಕ್ಷಿಕ,ಮಾಸಿಕೆ ಪತ್ರಿಕೆಯ ಪತ್ರಕರ್ತರು ಪತ್ರಕರ್ತರ ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದರು.
ಜಿಲ್ಲಾ ಘಟಕದ ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ. ಅರ್ಜಿ ಮತ್ತು ಸದಸ್ಯತ್ವದ ನಿಗದಿತ ಶುಲ್ಕ ನೀಡಿ ಅರ್ಜಿ ಸಲ್ಲಿಸಬಹುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂಘದ ಜಿಲ್ಲಾ ಜಿಲ್ಲಾದ್ಯಕ್ಷ ಡಿ.ಜಿ.ನಾಗರಾಜ್ (ರಾಜು). ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿ ಅರವಿಂದ್. ಮೊ.9481090929 ಇವರನ್ನು ಸಂಪರ್ಕಿಸುವಂತೆ ತಿಳಿಸಿದರು.