ಭದ್ರಾವತಿ ಸೈನ್ಸ್ ಕಾಲೇಜು ವಿದ್ಯಾರ್ಥಿಗಳ ಬಗೆಹರೆಯದ ಶುಲ್ಕ ಗೊಂದಲ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಬೊಮ್ಮನಕಟ್ಟೆಯ ಸರ್ ಎಂ ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ ಸಿ ಹಾಗೂ ಬಿಸಿಎ ವಿದ್ಯಾರ್ಥಿಗಳ ಶುಲ್ಕ ಸಮಸ್ಯೆಯಿಂದ ತರಗತಿಗಳಿಂದ ಹೊರಗುಳಿದು ಶುಲ್ಕ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವಂತೆ ಪ್ರಾಂಶುಪಾಲರನ್ನು ಒತ್ತಾಯಿಸಿದ ಘಟನೆ ಸೋಮವಾರ ನಡೆದಿದೆ. 

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ 11 ಸಾವಿರ ರೂ ವಾರ್ಷಿಕ ಆದಾಯ ವಿರುವ ಹಾಗೂ ವಿದ್ಯಾರ್ಥಿ ನಿಯರಿಗೆ ಹೊರತು ಪಡಿಸಿ ಬಿಸಿಎ ಹಾಗೂ ಬಿಎಸ್ ಸಿ ವಿದ್ಯಾರ್ಥಿಗಳಿಗೆ ಮಾತ್ರ ಬಳಕೆ ಶುಲ್ಕ (ಯೂಸರ್ ಫಂಡ್ ಕಾಲೇಜು) ಕಟ್ಟುವಂತೆ ಆದೇಶದಿಂದ ವಿದ್ಯಾರ್ಥಿ ಗಳು ಗೊಂದಲಕ್ಕಿಡಾಗಿದ್ದರು. 

ಈ ಹಿನ್ನಲೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಸಾಫಿರ್ ಪಾಷ ಕಾಲೇಜಿನ ಪ್ರಾಂಶುಪಾಲ ರೊಂದಿಗೆ ಮಾತುಕತೆ ನಡೆಸಿ 
ಯೂಸರ್ ಫಂಡ್ ರದ್ದು ಪಡಿಸಲು ಅವಕಾಶ ಇದ್ದಲ್ಲಿ ಸರಿಪಡಿಸಲು ಮನವಿ ಮಾಡಿದರು. 

ಸಿಂಡಿಕೇಟ್ ಸದಸ್ಯರ ಮಾತಿಗೆ ಸಮಾಜಯಿಸಿ ನೀಡಿದ ಪ್ರಾಂಶುಪಾಲ ಡಾ.ಎಚ್.ಪಿ. ರಘುನಾಥ್ ರವರು ಮೇಲಾಧಿಕಾರಿ ಜಂಟಿ ನಿರ್ದೇಶಕ ಡಾ.ವಿಷ್ಣುಮೂರ್ತಿ ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಶುಲ್ಕ ರದ್ದತಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ನೆರೆದಿದ್ದ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಬಳಕೆ ಶುಲ್ಕ ರದ್ದತಿಗೊಳಿಸಿದ ಹಿನ್ನಲೆಯಲ್ಲಿ ನಮ್ಮ ಕಾಲೇಜಿನಲ್ಲಿ ರದ್ದು ಗೊಳಿಸಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು. 

1 ಕಾಮೆಂಟ್‌ಗಳು

ನವೀನ ಹಳೆಯದು