ವಿಜಯ ಸಂಘರ್ಷ ನ್ಯೂಸ್
ಚಿತ್ರದುರ್ಗ: ಗಾಂಧೀಜಿಯ ಅಹಿಂಸಾ ತತ್ವ ಇಂದಿನ ಜಗತ್ತಿಗೆ ಅನಿವಾರ್ಯ" ಇಂದು ಜಗತ್ತಿನಲ್ಲಿ ಮೋಸ ವಂಚನೆ ಹಿಂಸೆ ಯಿಂದ ನಲುಗುತ್ತಿರುವ ಈ ಜಗತ್ತಿಗೆ ಗಾಂಧೀಜಿ ಯವರ ಅಹಿಂಸಾ ತತ್ವ ಅನಿವಾರ್ಯ ಆಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ಶಾಂತಿ ನೆಮ್ಮದಿ ಸಾಧ್ಯ ಎಂದು ಚಿತ್ರದುರ್ಗದ ಐಯುಡಿಪಿ ಲೇ ಔಟ್ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗೌಸ್ ಫಯಾಜ್ ಹೇಳಿದರು.
ಬುಧವಾರ ಶಾಲಾ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1924 ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ರಾಷ್ಟ್ರೀಯತೆ ರಾಷ್ಟ್ರಪ್ರೇಮ ಭಕ್ತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಮೌಲ್ಯಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧಕ್ಷರು,ಸದಸ್ಯರು ಶಿಕ್ಷಕರಾದ ಅನುಸೂಯಮ್ಮ,ಅನಿತಕುಮಾರಿ, ಉಮ್ಮೆ ಸಲ್ಮಾ, ಅಕ್ಕಮಹಾದೇವಿ,ಪ್ರಸನ್ನ,ರಾಧಾ, ಆಯಿಷಾ ಇದ್ದರು.
ಶಿಕ್ಷಕರಾದ ತಿಪ್ಪೇಸ್ವಾಮಿ ಸ್ವಾಗತಿಸಿದರೆ, ಪ್ರಸಾದ್ ವಂದಿಸಿದರು.
Tags:
ಚಿತ್ರದುರ್ಗ ಶಾಲಾ ವರದಿ