ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ನಗರದ ಸ್ವಾಮಿ ವಿವೇಕಾ ನಂದ ಬಡಾವಣೆಯಲ್ಲಿರುವ ಗಾಡಿಕೊಪ್ಪದಲ್ಲಿ ಜೀವನ ಸಂಜೆ ವೃದ್ಧಾಶ್ರಮ ನಿರ್ವಹಿಸುತ್ತಿರುವ ಶ್ರೀ ಜ್ಞಾನೇಶ್ವರಿ ಸೇವಾ ಟ್ರಸ್ಟ್ ಗೆ ಶ್ರೀಕ್ಷೇತ್ರ ಹೊರನಾಡು ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಿಂದ ನೀಡುವ ಪ್ರತಿಷ್ಠಿತ ಜೀವ-ಭಾವ ಯೋಜನೆಯ ಶ್ರೀಮಾತಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ಶ್ರೀ ಹೊರನಾಡು ಅನ್ನ ಪೂಣೇಶ್ವರಿ ಕ್ಷೇತ್ರದಿಂದ ಆಯೋಜಿ ಸಿದ್ದ ಶ್ರೀ ನವಗ್ರಹ ಹೋಮ ಮತ್ತು ಧರ್ಮಕರ್ತರ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿದೆ.
ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಯಲ್ಲಿರುವ ಗಾಡಿಕೊಪ್ಪ ದಲ್ಲಿ ಶ್ರೀ ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ ಜೀವನ ಸಂಜೆ ವೃದ್ಧಾಶ್ರಮ ನಡೆಸುತ್ತಿದೆ. 32 ವರ್ಷಗಳಿಂದ ಟ್ರಸ್ಟ್ ಜೀವನ ಸಂಜೆ ವೃದ್ಧಾಶ್ರಮವನ್ನು ಸ್ಥಾಪಿಸಿ, ಅಶಕ್ತ ವೃದ್ಧರಿಗೆ ಸೇವೆಯನ್ನು ಸಲ್ಲಿಸುತ್ತ ಬಂದಿರುವ ಸೇವೆಯನ್ನು ಉತ್ತಮವಾದುದು ಎಂದು ಪರಿಗಣಿಸಿ ಶ್ರೀ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ ಅವರು 34ನೇ ಪಟ್ಟಾಭಿಷೇಕೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಮಾತಾ ಪ್ರಶಸ್ತಿ ಮತ್ತು ಒಂದು ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಿದರು.
ಶ್ರೀ ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ ಅಧ್ಯಕ್ಷ ಹಾಲಪ್ಪ ಪ್ರಶಸ್ತಿ ಸ್ವೀಕರಿಸಿದರು.
ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಂಗಳೂರಿನ ಸೆರಾಯಿ ಗಣಪತಿ ದೇವಸ್ಥಾನದ ಧರ್ಮದರ್ಶಿ ರಾಘವೇಂದ್ರ ಭಟ್, ಭೀಮೇಶ್ವರ ಜೋಷಿ ಕುಟುಂಬ ದವರು,ಟ್ರಸ್ಟ್ ಖಜಾಂಚಿ ಚಂದ್ರಹಾಸ್ ಪಿ ರಾಯ್ಕರ್ ಮತ್ತು ಕಾರ್ಯದರ್ಶಿ ಕೆ.ಎಸ್.ಸುನೀಲ್, ಟ್ರಸ್ಟಿಗಳಾದ ಚಂದ್ರಶೇಖರ ರಾಯ್ಕರ್, ಪ್ರೇಮ್‌ಕುಮಾರ್ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ