ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ತೀರ್ಥಹಳ್ಳಿಯ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವಲಯಮಟ್ಟದ ರೋಟರಿ ಸಾಂಸ್ಕೃತಿಕ ತುಂಗಾ ಕಲೋತ್ಸವ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ವಿಜೇತರಾಗಿದ್ದಾರೆ.
ರೋಟರಿ ಸಂಸ್ಥೆ ಸದಸ್ಯರು ಎಲ್ಲ 8 ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿದ್ದಾರೆ.
ಸೋಲೊ ಚಿತ್ರಗೀತೆಯಲ್ಲಿ ಸಂಸ್ಥೆಯ ಆಕಾಶ್ ಪ್ರಥಮ ಸ್ಥಾನ, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ಪಡೆದರು.
ಮಕ್ಕಳ ವಿಭಾಗದಲ್ಲಿ ಸೋಲೊ ನೃತ್ಯ ವಿಭಾಗದಲ್ಲಿ ಕೀರ್ತನಾ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಸಮೂಹ ಗಾಯನ ವಿಭಾಗದಲ್ಲಿ ದ್ವಿತೀಯ, ಸಮೂಹ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದರು. ಸ್ಕಿಟ್ ವಿಭಾಗ ದಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡಿದರು.
ಡಾ. ಅರುಣ್, ರಾಜ್ಯಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರೇಣುಕಪ್ಪ ನಿರ್ದೇಶನದಲ್ಲಿ ರೋಟರಿ ಸದಸ್ಯರು ನಾಟಕ ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ರಂಜಿಸಿದರು. ಒಟ್ಟು ನಾಲ್ಕು ಬಹುಮಾನ ಪಡೆದು ಜಿಲ್ಲಾ ಮಟ್ಟದ ಸೋಲೊ ನೃತ್ಯ, ಸೋಲೊ ಚಿತ್ರಗೀತೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ರೋಟರಿ ಸಹಾಯಕ ಗವರ್ನರ್ ಪ್ರೊ. ಎಚ್.ಎಂ.ಸುರೇಶ್‌ಕುಮಾರ್, ಜಿಲ್ಲಾ ಸಾಂಸ್ಕೃತಿಕ ಉಪಾಧ್ಯಕ್ಷ ಧಮೇಂದರ್ ಸಿಂಗ್ ಬಂಟಿ, ಜೆ.ರಾಧಾಕೃಷ್ಣ, ಶ್ರೀಕಾಂತ್, ಕೆ.ಪಿ.ಸ್ವಾಮಿ, ಭರತಕುಮಾರ್, ಶಿವಪ್ರಸಾದ್, ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಡಾ. ಗುಡದಪ್ಪ ಕಸಬಿ, ಮಂಜುನಾಥ ರಾವ್ ಕದಂ, ಕಿಶರ‍್ಕುಮಾರ್, ಸುಮತಿ ಕುಮಾರಸ್ವಾಮಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಸಂತೋಷ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಕೌಸ್ತುಭಾ ಅರುಣ್, ಡಾ. ಧನಂಜಯ, ಬಿಂದು ವಿಜಯಕುಮಾರ್, ನಾಗವೇಣಿ, ಪ್ರತಾಪ್ ಲಕ್ಷ್ಮಣ್, ಅನುಷ್‌ಗೌಡ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ರೋಟರಿ ಸುದ್ದಿ