ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಾಡಿನ ಸಮಸ್ಯೆಗಳಿಗೆ
ಸದನದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಲೇ ಬೆಳಕು ಚೆಲ್ಲುತ್ತಿದ್ದ ಧೀಮಂತ ರಾಜಕೀಯ ಮುತ್ಸದಿ ಮಾಜಿ ಮುಖ್ಯಮಂತ್ರಿ ದಿ| ಜೆ.ಹೆಚ್. ಪಟೇಲರು ಸರ್ವ ಕಾಲಕ್ಕೂ ಪ್ರಸ್ತುತರೆಂದು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್ ಹೇಳಿದರು.
ಅವರು ಹಳೇನಗರದ ಶ್ರೀ ವೀರ ಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಹೆಚ್.ಪಟೇಲರ ಅಭಿಮಾನಿ ಬಳಗದಿಂದ ಹಮ್ಮಿ ಕೊಂಡಿದ್ದ 94 ನೇ ಜನ್ಮ ದಿನಾಚರಣೆ ಹಾಗೂ ವಿಐಎಎಲ್-ಎಂಪಿಎಂ ಕಾರ್ಖಾನೆಗಳ ಪುನಶ್ವೇತನ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಟೇಲರು ಕರ್ನಾಟಕ ರಾಜ್ಯದ ಸಿಎಂ ಆಗಿದ್ದಾಗ ರಾಜ್ಯದ ಜನತೆಗಾಗಿ ಹಲವು ರೂಪಿಸಿದರು ಯೋಜನೆ ಕಾರ್ಮಿಕರು ಮತ್ತು ಬಡವರ ಕಾಳಜಿ ಹೊಂದಿದ್ದರು. ಎಂಪಿಎಂ ಕಾರ್ಖಾನೆಗೆ ಸಾಕಷ್ಟು ಅಭಿವೃದ್ಧಿಗೆ ಒತ್ತು ನೀಡಿದ್ದರು. ಅದೇ ರೀತಿ ಕಾರ್ಮಿಕರನ್ನು ಮತ್ತು ಕಾರ್ಮಿಕ ಕುಟುಂಬಗಳನ್ನು ಉಳಿಸಲು ನಷ್ಟ ದಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆ ಯನ್ನು ಅಂದಿನ ಸಂಸದರಾಗಿದ್ದ ಟಿ.ವಿ.ಚಂದ್ರಶೇಖರಪ್ಪ ಜೊತೆಗೂಡಿ ಕಾಯಕಲ್ಪ ಮತ್ತು ಬಂಡವಾಳ ತೊಡಗಿಸಿ ಉದ್ಯೋಗವಕಾಶ ಕಲ್ಪಿಸಲು ಅಂದಿನ ಕೇಂದ್ರ ಸರಕಾರದ ಉಕ್ಕು ಪ್ರಾಧಿಕಾರಕ್ಕೆ ಸೇರಿಸಲು ಯಶಸ್ವಿಯಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಆಹ್ವಾನಿಸಿ ಕೇವಲ ಒಂದು ರೂ ಮುಖ ಬೆಲೆಗೆ ಸಂಪೂರ್ಣ ಕಾರ್ಖಾನೆಯ ಆಸ್ತಿಯನ್ನು ಹಸ್ತಾಂತರಿಸಿದರು. ಆದರೆ ಕೇಂದ್ರ ಬಿಜೆಪಿ ಸರಕಾರ ಈ ಉದ್ದಿಮೆಯನ್ನು ಹಿಂಡಿ ಹಿಪ್ಪೆ ಮಾಡಿ ಒಂದು ಬಿಡಿಗಾಸು ಮಾರಾಟಕ್ಕೆ ಬಂಡವಾಳ ತೊಡಗಿಸದೆ
ಮುಂದಾಗಿರುವುದು ಶೋಚನೀಯ ವಾಗಿದೆ.
ಸಂಸದರು ವಿಐಎಸ್ಎಲ್ ಉಳಿಸುವ ಭರವಸೆ ನೀಡಿದ್ದರೆ, ಶಾಸಕರು ಎಂಪಿಎಂ ಪುನರ್ ಆರಂಭಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಜೆಡಿಯು ರಾಜ್ಯ ಮಾಜಿ ಕಾರ್ಯದರ್ಶಿ ಶಶಿಕುಮಾರ್ ಎಸ್.ಗೌಡ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ವಕೀಲ ಶಿವಕುಮಾರ್ ಉಪನ್ಯಾಸ ನೀಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ನಿವೃತ್ತ ಎಇಇ ದಯಾನಂದ್, ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಗಂಗಾಧರ್, ಎಂಪಿಎಂ ನಿವೃತ್ತ ಕಾರ್ಮಿಕರ ನೊಂದ ವೇದಿಕೆ ಸಂಚಾಲಕ ಬಸವರಾಜಯ್ಯ, ಕನ್ನಡ ರಕ್ಷಣಾ ವೇದಿಕೆಯ ಡಾ.ಜ್ಯೋತಿ ಸೋಮಶೇಖರ್ ಮುಂತಾದವರಿದ್ದರು.