ಆಯುಧ ಪೂಜೆ ಪ್ರಯುಕ್ತ ದೇವಾಲಯ ದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯ ದಲ್ಲಿ ವಿಜಯದಶಮಿ ಮತ್ತು ಆಯುಧ ಪೂಜೆ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಥಪೂರ್ಣ ವಾಗಿ ನೆರವೇರಿದವು.

ಗವಿಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನವೀರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ವಿವಿಧ ಪೂಜೆ, ಉತ್ಸವ ಗಳು ನಡೆದವು.ನವರಾತ್ರಿಯ ಕೊನೆ ದಿನವಾದ ವಿಜಯ ದಶಮಿ ಅಂಗವಾಗಿ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯವನ್ನು ಹೂವುಗಳಿಂದ ಸಿಂಗರಿಸಿ, ಹೋಮ ಹವನ ನೆರವೇರಿಸಿದರು.

 ದೇವಾಲಯದ ಆವರಣದಲ್ಲಿ ಬನ್ನಿ ಮರಕ್ಕೆ ಸುಮಂಗಲಿಯರು ಅರಿಶಿಣ, ಕುಂಕುಮ ಇಟ್ಟು, ಬಳೆ ರವಿಕೆ ಕಣ ಅರ್ಪಿಸಿ, ಆಯುಧ ಗಳನ್ನು ಇಟ್ಟು ಪೂಜಿಸಿದರು. ನೂರಾರು ಜನರ ಸಮ್ಮುಖದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಕಾಪನಹಳ್ಳಿ ಯೋಗೇಶ್ ಬನ್ನಿ ಕಡಿದರು. ನೆರೆದಿದ್ದ ಜನತೆ ಭಕ್ತಿ, ಧಾರ್ಮಿಕ ನಂಬಿಕೆಯಿಂದ ಬನ್ನಿ ತೆಗೆದು ಕೊಂಡು ಮಹಾ ಮಂಗಳಾರತಿ ನೆರೆದಿದ್ದ ಭಕ್ತರಿಗೂ ತೀರ್ಥ ಪ್ರಸಾದ ಹಾಗೂ ನೈವೇದ್ಯವನ್ನು ಹಂಚಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗವಿಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮೀಜಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ವಿಜಯದಶಮಿ ಸಂಭ್ರಮಕ್ಕೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ನವರಾತ್ರಿಯ ಒಂಭತ್ತನೇ ದಿನವನ್ನು ಕರ್ನಾಟಕದಲ್ಲಿ ಆಯುಧ ಪೂಜೆ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಆಯುಧ ಪೂಜೆ ದಿನ ವಿವಿಧ ಉಪಕರಣಗಳು, ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು, ಉಪಕರಣಗಳು, ವಾಹನಗಳನ್ನು ಪೂಜಿಸುತ್ತೇವೆ ಆಯುಧಪೂಜೆಯು ಹೆಸರೇ ಎಲ್ಲಾ ರೀತಿಯ ಉಪಕರಣ ಗಳನ್ನು ಪೂಜಿಸಲಾಗುವುದು.ಶ್ರೀ ಚಾಮುಂಡೇಶ್ವರಿ ದೇವಿಯ ರಾಕ್ಷಸ ಮಹಿಷಾಸುರನ ವಿರುದ್ಧದ ಯುದ್ಧದ ಹಿಂದಿನ ದಿನ ಆಯುಧ ಪೂಜೆ ಯನ್ನು ನಡೆಸಲಾಯಿತು. ಆಕೆ ಯುದ್ಧಕ್ಕೆ ಹೊರಡುವ ಮೊದಲು ಚಾಮುಂಡೇಶ್ವರಿ ದೇವಿಯ ಎಲ್ಲಾ ಆಯುಧಗಳನ್ನು ಪೂಜಿಸ ಲಾಯಿತು ಎಂದು ಪುರಾಣದಲ್ಲಿ ಉಲ್ಲೇಖಿಸ ಲಾಗಿದೆ. ನಂತರದ ದಿನವು ರಾಕ್ಷಸನ ವಿರುದ್ಧದ ಯುದ್ದದಲ್ಲಿ ಅವಳ ವಿಜಯದ ಆಚರಣೆಯಾಗಿದೆ ಎಂದು ವಿಜಯದಶಮಿಯ ಇತಿಹಾಸ ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಗವಿಮಠ ನಮ್ಮ ತಾಲೂಕಿನ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ, ಈ ಪುಣ್ಯ ಕ್ಷೇತ್ರ ನಂಬಿ ಬಂದ ಭಕ್ತರ ಇಷ್ಟಾರ್ಥ ಸಿದ್ದಿ ಕಲ್ಪಿಸುವ ಜ್ಞಾನ ದೇಗುಲವಾಗಿ ಪ್ರತಿಯೊಂದು ಆಚಾರ ವಿಚಾರದಲ್ಲೂ ವಿಶೇಷವಾಗಿ ಆಚರಿಸುವ ಮೂಲಕ ಶ್ರೀ ಕ್ಷೇತ್ರ ಜನರ ಮನದಲ್ಲಿದೆ ಹಾಗೂ ಹಬ್ಬಹರಿದಿನ ಗಳಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನ ನೀಡಲಾಗಿದ್ದು, ಅವುಗಳ ಆಚರಣೆ ಗ್ರಾಮೀಣ ಜನರ ಒಗ್ಗಟ್ಟಿನ ಸಂಕೇತವಾಗಿದೆ. ಹೀಗಾಗಿ ಅವುಗಳ ಆಚರಣೆಯಲ್ಲಿ ಇಂದಿಗೂ ಸಡಗರ, ಉತ್ಸಾಹಕ್ಕೆ ಈ ಕಾರ್ಯಕ್ರಮ ಉದಾರಣೆ ಎಂದರು.

ಕಾರ್ಯಕ್ರಮದಲ್ಲಿ ಕಾಪನಹಳ್ಳಿ ಹರೀಶ್, ಕಾಮನಹಳ್ಳಿ ಯೋಗೇಶ್, ಬ್ಯಾಂಕ್ ಪರಮೇಶ್, ನಟನಹಳ್ಳಿ ಮುರಳಿ, ಕಟ್ಟಹಳ್ಳಿ ವಸಂತಪ್ಪ, ಪ್ರಕಾಶ್, ದೇವಾಲಯದ ಅರ್ಚಕ ಹೇಮಂತ್ ಕುಮಾರ್,ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜೀಗೆರೆ ಮಹೇಶ್ ಸೇರಿದರೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು