ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ತರೀಕೆರೆ ರಸ್ತೆಯ ಗಾಂಧಿ ಸರ್ಕಲ್‌ನಲ್ಲಿ ತಲೆ ಎತ್ತಿರುವ ಬೀದಿ ಬದಿಯ ತಿಂಡಿ ಅಂಗಡಿ ಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನಲೆ ನಗರಸಭೆ ಯಲ್ಲಿ ನಡೆದ ವ್ಯಾಪಾರಿಗಳ 3 ನೇ ಅಂತಿಮ ಸಭೆಯಲ್ಲಿ ಸ್ಥಳಾಂತರಕ್ಕೆ ಅಸ್ತು ನೀಡಲಾಯಿತು. ಬೀದಿ ಬದಿಯ ತಿಂಡಿ ಅಂಗಡಿಗಳ ವ್ಯಾಪಾರಿಗಳು ಸಹಾ ಒಪ್ಪಿಗೆ ಸೂಚಿಸಿದರು.
ನಗರಸಭೆಯ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ ನಿಮ್ಮ ತಿಂಡಿ ಅಂಗಡಿಗಳಿಂದ ಸಾರ್ವಜನಿಕ ರಿಗೆ ಮತ್ತು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಪೊಲೀಸರು ಎಂದೋ ನಿಮ್ಮನ್ನು ಕಾರಣ ಕೇಳದೆ ಎತ್ತಂಗಡಿ ಮಾಡುತ್ತಿದ್ದರು. ನಾವು ನಿಮ್ಮೆಲ್ಲರ ಹಿತ ಕಾಯಲು ಉಳಿಸಿದ್ದೇವೆ. ನಗರಸಭೆ ಯಿಂದ ಸಹಾಯ ಹಸ್ತ ನೀಡಲು ಮುಂದಾಗಿದ್ದೇವೆ. ಶಾಸಕರು ನಿಮ್ಮ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂದು. ನಿಮಗೂ ಬದುಕು ರೂಪಿಸಲು ಮಾರ್ಗೋಪಾಯ ಮಾಡಿ ಕೊಡಲು ಹಾಗೂ ಶಾಶ್ವತ ಪರಿಹಾರ ಮಾಡುವಂತೆ ನಡೆಸಿದ ಮಾತುಕತೆ ಯಿಂದಾಗಿಹತ್ತಿರದ ಟಿ.ಕೆ.ರಸ್ತೆಯ ಮೇಲ್ಸೇತುವೆ (ಪ್ರೈಓವರ್ ಬ್ರಿಡ್ಜ್) ಕೆಳಭಾಗದಲ್ಲಿ ಪ್ಲಾಟ್ ಫಾರಂಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸ ಲಾಗಿದೆ. ನಗರಸಭೆ ಆದಷ್ಟು ಶೀಘ್ರ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಬದುಕು ಹಸನಾಗಲಿ ಎಂದರು.
ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪ ನವರ್ ಮಾತನಾಡಿ ಒಟ್ಟು 26 ಮಂದಿ ವ್ಯಾಪಾರಿಗಳಿಗೆ 19 ಲಕ್ಷ ರೂ ವೆಚ್ಚದಲ್ಲಿ ನಿರ್ಧಿಷ್ಟ ಅಳತೆಯಂತೆ ಫುಡ್ಕೋರ್ಟ್ ಪ್ಲಾಟ್‌ಫಾರಂ ನಿರ್ಮಿಸಿ ಕುಡಿಯಲು ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ ಕಲ್ಪಿಸ ಲಾಗುವುದು. ಲಾಟರಿ ಮೂಲಕ ಸ್ಥಳವಕಾಶ ಮಾಡಲಾಗುತ್ತದೆ.
ಬಡವರ ಕಾಳಜಿ ಹೊತ್ತ ಶಾಸಕರ ಹೆಸರಲ್ಲಿ ಜ. 26ರ ಗಣರಾಜ್ಯೋತ್ಸವ ದಿನದಂದು ಉದ್ಘಾಟನೆಗೆ ಸಿದ್ಧತೆ ಮಾಡಲಾಗುತ್ತದೆ. ನಂತರ ಮತ್ತೆರೆಡು ಫುಡ್ ಕೋರ್ಟ್ ಮಾಡಲಾಗುತ್ತದೆ ಎಂದರು.
ನಗರಸಭೆ ಸಮೂಹ ಸಮನ್ವಯಾಧಿ ಕಾರಿ ಸುಹಾಸಿನಿ ಪ್ರಾಸ್ತಾವಿಕ ನುಡಿಗಳನ್ನಾಡಿ ಮಾಹಿತಿ ನೀಡಿದರು. ಮಾಜಿ ನಗರಸಭಾಧ್ಯಕ್ಷೆ ಅನುಸುಧಾ ಮೋಹನ್, ಹಿರಿಯ ಸದಸ್ಯ ವಿ.ಕದಿರೇಶ್, ಸುದೀಪ್ ಕುಮಾರ್ ಮುಂತಾದವರು ಮಾತನಾಡಿದರು.
ವ್ಯಾಪಾರಿಗಳು ವಸ್ತುಗಳ ರಕ್ಷಣೆಗೆ ಖಾಯಂ ಶೆಡ್ ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟರು. ಪ್ರಥಮವಾಗಿ ಶಾಶ್ವತ ಪರಿಹಾರವಾಗಿ ಸ್ಥಳಾಂತರ ನಂತರ ಮುಂದಿನ ಯೋಜನೆ ರೂಪಿಸುವ ಭರವಸೆ ನೀಡಲಾಯಿತು.