ತಿರುಮಲ ಚಾರಿಟಬಲ್ ಪೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವದ ಜೊತೆ ಪರಿಸರದ ಅರಿವು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಶ್ರೀ ತಿರುಮಲ ಚಾರಿ ಟಬಲ್ ಪೌಂಡೇಶನ್ ವತಿಯಿಂದ ನಗರದ ಬಿ.ಎಚ್. ರಸ್ತೆಯಲ್ಲಿ ಪರಿಸರ ಪ್ರೇಮಿಗಳೊಂದಿಗೆ 80 ಗಿಡಗಳನ್ನು ನೆಡುವ ಮೂಲಕ ಅದ್ದೂರಿಯಾಗಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಯುವ ಜನತೆಯಲ್ಲಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ದಿ:ಡಾ.ಎಪಿಜೆ ಅಬ್ದುಲ್ ಕಲಾಂ ರವರ ಜನ್ಮ ದಿನ ಹಾಗೂ ಟಾಟಾ ಸಂಸ್ಥೆಯ ದಿ:ರತನ್ ಟಾಟಾ ರವರ ಸ್ಮರಣೆಯನ್ನು ಮಾಡಲಾಯಿತು. 

ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಸಮುದಾಯದ ಮೂರು ಧರ್ಮ ಗುರುಗಳ ಮುಖಂಡರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಧರ್ಮ ಗುರುಗಳು ಪರಿಸರದ ಕುರಿತು ಹಲವಾರು ಜಾಗೃತಿ ವಿಚಾರಗಳನ್ನು ವೃಕ್ಷು ರಕ್ಷಿತಾ ರಕ್ಷಿತಹ ಎಂಬ ದ್ಯೇಯೋದ್ದೇಶಗಳನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವೀರಾಂಜನೇಯ ದೇವಾಲಯದ ಅರ್ಚಕರಾದ ಶ್ರೀ ರಾಘವೇಂದ್ರ, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ಸೆಲ್ವರಾಜ್, ಮುಸ್ಲಿಂ ಸಮುದಾಯದ ಮೌಲಿಗಳಾದ ಸೈಯದ್ ಮುಜಾಹಿದ್ ರಜ್ವಿ , ಪಂಡಿತ್ ಪುಟ್ಟರಾಜು ಗವಾಯಿ ಪುರಸ್ಕೃತ ಟ್ರಾಫಿಕ್ ಪೊಲೀಸರಾದ ಹಾಲೇಶಪ್ಪ, ಎಂಪಿಎಂ ನಿವೃತ್ತ ಕಾರ್ಮಿಕರಾದ ಬಸವರಾಜ್, ರಾಮ ಸೇನೆಯ ಅಧ್ಯಕ್ಷ ಉಮೇಶ್, ರಾಜು ನಾಯಕ್, ಸೂಡ ಸದಸ್ಯ ರವಿಕುಮಾರ್, ಮೀನು ಸೊಸೈಟಿ ಮಂಡಳಿ ಅಧ್ಯಕ್ಷ ಮುರುಗೇಶ್, ತಿರುಮಲ ಚಾರಿ ಟಬಲ್ ಪೌಂಡೇಶನ್ ನ ಸಂಸ್ಥಾಪಕ ಪ್ರಶಾಂತ್, ತೀರ್ಥೇಶ್, ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

ಸಾಮಾಜಿಕ ಕಾರ್ಯಕ್ರಮದ ವಿವಿರ ವೀಕ್ಷಿಸಲು SRI THIRUMALA CHARITABLE FOUNDATION. ಫೇಸ್ಬುಕ್ ಯೂ ಟೂಬ್ ಇನ್ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಬೇಕಾಗಿ ಟ್ರಸ್ಟ್ ವಿನಂತಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು