ವಿಜಯ ಸಂಘರ್ಷ ನ್ಯೂಸ್
ಹುಣಸಗಿ: ತಾಲ್ಲೂಕಿನ ಅಗ್ನಿ ಗ್ರಾಮದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತ ವಾಗಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ರಸ್ತೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಮದ ವಾರ್ಡ್ 1 ಮತ್ತು 3 ರಲ್ಲಿ ರಸ್ತೆ ಮತ್ತು ಚರಂಡಿ ಹಾಳಾಗಿ ರಸ್ತೆ ಮೇಲೆ ಚರಂಡಿ ನೀರು ಹರಿದಾಡಿ ರಸ್ತೆ ಹಳ್ಳದಂತೆ ಆಗಿದೆ. ಪ್ರತಿನಿತ್ಯ ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ನಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯ್ತಿ ಕಚೇರಿಗೆ ಅರ್ಜಿ ನೀಡಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಸಮಸ್ಯೆಗಳಿಂದ ಬೇಸತ್ತ ಗ್ರಾಮಸ್ಥರು ಪ್ರತಿಮನೆಗಳಿಂದ ದೇಣಿಗೆ ಸಂಗ್ರಹಿಸಿ ಸ್ವತಃ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ.
ಅಗ್ನಿ ಗ್ರಾಮ ಟಿಪ್ಪು ಸುಲ್ತಾನ್ ಗ್ರಾಮ ಘಟಕದ ಪ್ರಮುಖರಾದ ರಾಜೇಶ್ ಕೊತ್ವಾಲ್, ಚಂದಾಹುಸೇನ, ಮಕನದರ್, ತನ್ವೀರ್ ಜಾಫರ್ ಯಾಸಿನ ಮೌಲಾಸಾಬ್ ಮಲ್ಲಣ ಪೂಜಾರಿ, ಮಧುಸೂದನ್, ಬಿರಾದರ್ ಮಹಮ್ಮದ್ ಶಾ ,ಇಸ್ಮಾಯಿಲ್ ಮತ್ತು ರಸೂಲ್ ಜಾಗಿರದಾರ್ ಇನ್ನಿತರು ಭಾಗವಹಿಸಿದ್ದರು.
(ವರದಿ ✍️ ಶಿವು ರಾಠೋಡ್ ಯಾದಗಿರಿ)
Tags
ಯಾದಗಿರಿ ಹುಣಸಗಿ ವರದಿ