ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಾಸ್ತ್ರ ಹೇಳುವ ನೆಪದಲ್ಲಿ ಮನೆಗೆ ಆಗಮಿಸಿ ಲಕ್ಷಾಂತರ ರೂ ನಗದು, ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಳೇ ಕೂಡ್ಲಿಗೆರೆ ಗ್ರಾಮದ ಎಚ್.ಮಹೇಶ್ ಎಂಬುವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಶಾಸ್ತ್ರ ಹೇಳುವುದಾಗಿ ಬಂದಿದ್ದಾನೆ. ಮನೆಯ ಸಮಸ್ಯೆ ಬಗೆಹರಿಸುವುದಾಗಿ ನಂಬಿಸಿ ಜು.22 ರಂದು ಮನೆಯವರಿಂದ ಸುಮಾರು 3 ಲಕ್ಷ ರು.ಮೌಲ್ಯದ 47 ಗ್ರಾಂ. ಚಿನ್ನದ ಆಭರಣ ಗಳನ್ನು ತೆಗೆದುಕೊಂಡು ಪೆಟ್ಟಿಗೆ ಯಲ್ಲಿಟ್ಟಂತೆ ಮಾಡಿ ಮನೆಯ ಕೋಣೆಯಲ್ಲಿ ಇಟ್ಟು ತಾನೊಬ್ಬನೆ ಹೋಗಿ ಪೂಜೆ ಮಾಡಿ 41 ದಿನ ಗಳ ಬಳಿಕ ಬೀಗ ತೆಗೆಯಬೇಕು ಹಾಗೂ ಪ್ರತಿನಿತ್ಯ ಪೂಜೆ ಮಾಡುವಂತೆ ತಿಳಿಸಿದ್ದಾನೆ. 41 ದಿನಗಳ ನಂತರ ಮನೆಯವರು ಆ ವ್ಯಕ್ತಿಗೆ ಪೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ಅನುಮಾನದ ಮೇರೆಗೆ ಪೆಟ್ಟಿಗೆಯ ಬೀಗ ತೆಗೆದಾಗ ನಕಲಿ ಆಭರಣಗಳನ್ನು ಇಟ್ಟು ಮೋಸ ಮಾಡಿದ್ದು ಗೊತ್ತಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ ಆಭರಣಗಳನ್ನು ಹಾಗೂ 1.5 ಲಕ್ಷ ರೂ.ನಗದು ಹಣ ವಾಪಸ್ ದೊರಕಿ ಸಿಕೊಡುವಂತೆ ನ.20 ರಂದು ದೂರು ನೀಡಲಾಗಿದೆ. ಇದೇ ಮಾದರಿಯಲ್ಲಿ ಅತ್ತಿಗುಂದ ಗ್ರಾಮದ ದೇವೇಂದ್ರಪ್ಪ ಎಂಬುವರ ಮನೆಗೆ ಅಪರಿಚಿತನೊಬ್ಬ ಮನೆ ಸಮಸ್ಯೆ ಬಗೆಹರಿಸಲು ಪೂಜೆ ಮಾಡುವು ದಾಗಿ 40 ತೊಲ ಬಂಗಾರ ಹಾಗೂ ನಗದು ಹಣ ಪೂಜೆಗೆ ಇರಿಸುವಂತೆ ತಿಳಿಸಿದ್ದಾನೆ.
ಆತನನ್ನು ನಂಬಿ ಮನೆಯವರು ಬಂಗಾರ ನೀಡಿದ್ದಾರೆ.ಮನೆಯ ಕೋಣೆಯಲ್ಲಿ ಆತನೊ ಬ್ಬನೆ ಹೋಗಿ ಪೂಜೆ ಮಾಡಿದ್ದು, ಬಂಗಾರ ವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ 48 ದಿನಗಳ ಕಾಲ ನಿತ್ಯ ಪೂಜೆ ಮಾಡಬೇಕು ಹಾಗೂ ಅಲ್ಲಿಯವರೆಗೂ ಯಾರೂ ಬೀಗ ತೆಗೆಯದಂತೆ ತಿಳಿಸಿದ್ದಾನೆ. ನಂತರ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿದ್ದು, ಅನುಮಾನದ ಮೇರೆಗೆ ಬೀಗತೆಗೆದಾಗ ಖಾಲಿ ಪೆಟ್ಟಿಗೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ 23.10 ಲಕ್ಷ ರು.ಮೌಲ್ಯದ ಆಭರಣ ಹಾಗೂ 2.25 ಲಕ್ಷ ರು. ನಗದು ದೊರಕಿಸಿ ಕೊಡುವಂತೆ ನ.20ರಂದು ದೂರು ನೀಡಲಾಗಿದೆ.
Tags
ಭದ್ರಾವತಿ ಕ್ರೈಮ್ ವರದಿ