ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಶಾಖೆಯ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯತ್ವಕ್ಕೆ ಚುನಾವಣೆ ಶನಿವಾರ ನಡೆದಿದ್ದು ಮೂವರನ್ನ ಮತಚಲಾವಣೆ ಮೂಲಕ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷ ಸ್ಥಾನದ ಚುನಾವಣೆಯು ಬಿ. ಸಿದ್ದಬಸಪ್ಪ ಮತ್ತು ಡಾ.ಗಿರೀಶ್ ನಡುವೆ ಸ್ಪರ್ಧೆ ಉಂಟಾಗಿ ಮತದಾನ ನಡೆದಿದೆ. ಸಿದ್ದಬಸಪ್ಪ. ಬಿ ರವರಿಗೆ 22 ಮತಗಳು ಲಭಿಸಿದರೆ, ಎದುರಾಳಿ ಡಾ:ಗಿರೀಶ್ ಅವರಿಗೆ 11 ಮತ ಲಭಿಸಿದೆ. ಸಿದ್ದಬಸಪ್ಪ ಬಿ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಪ್ರಶಾಂತ್ ಮತ್ತು ವೆಂಕಟೇಶ್ವರಪ್ಪ ನಡುವೆ ಸ್ಪರ್ಧೆಯುಂಟಾ ಗಿದ್ದು, ಪ್ರಶಾಂತ್ ಗೆ 22 ಮತಗಳು, ವೆಂಕಟೇಶ್ವರಪ್ಪರಿಗೆ 12 ಮತಗಳು ಲಭಿಸಿದ್ದು, ಪ್ರಶಾಂತ್ ಜಯಗಳಿಸಿದ್ದಾರೆ.
ರಾಜ್ಯ ಪರಿಷತ್ ಸದಸ್ಯರ ಆಯ್ಕೆಯಲ್ಲಿ ರಾಜಕುಮಾರ್ ಮತ್ತು ವೆಂಕಟೇಶ್ ಅವರ ನಡುವೆ ಮತದಾನ ನಡೆದಿದ್ದು, ರಾಜಕುಮಾರ್ ಗೆ 15 ಮತಗಳು ಮತ್ತು ವೆಂಕಟೇಶ್ ಗೆ 19 ಮತಗಳು ಲಭಿಸಿದ್ದು, ವೆಂಕಟೇಶ್ ಅವರು ಜಯ ಗಳಿಸಿದ್ದಾರೆ.
ಶಾಖೆಗೆ ಮಾತ್ರ
ಪ್ರತ್ಯುತ್ತರಅಳಿಸಿ