ವಿಜಯ ಸಂಘರ್ಷ ನ್ಯೂಸ್
ಯಾದಗಿರಿ: ಜಿಲ್ಲೆ ಹುಣಸಗಿ ತಾಲೂಕಿನ ಮಾರನಾಳ ತಾಂಡ ಕ್ರಾಸ ನಲ್ಲಿ ವಿದ್ಯಾರ್ಥಿಗಳಿಂದ ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಲಾಯಿತು.
ನಿಗದಿತ ಸಮಯಕ್ಕೆ ಬಸ್ ಬರದೇ ಇರುವ ಕಾರಣಕ್ಕೆ ಶಾಲೆ, ಕಾಲೇಜು ಮಕ್ಕಳಿಂದ ಪ್ರತಿಭಟನೆ. ಸಮಯಕ್ಕೆ ಬರುವ ಬಸ್ಸುಗಳು ಬೇರೆ ಸಮಯಕ್ಕೆ ವರ್ಗಾಯಿಸಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದರು.
ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಸರಿಯಾದ ಸಮಯಕ್ಕೆ ಬಸುಗಳು ಒದಗಿಸಲು ಪ್ರತಿ ವರ್ಷವೂ ಮನವಿ ಮಾಡುತ್ತಲೇ ಬರುತ್ತಿದ್ದೇವೆ. ಅದರೆ ಸಂಬಂಧಿತ ಇಲಾಖೆ ನಿರ್ಧಾರವೇ ತಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುವಂತಾಗುತ್ತದೆ. ಎಂದು ಕೆಎಸ್ಆರ್ಟಿಸಿ ಸುರಪುರ್ ಘಟಕದ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿ ಕೊಂಡರು. ಮನವಿಗೆ ಸ್ಪಂದಿಸಿದ ಮೇಲಾಧಿಕಾರಿಯು ಸರಿಯಾದ ಸಮಯಕ್ಕೆ ತಮಗೆ ಬಸ್ಸು ಒದಗಿಸುವುದಾಗಿ ಭರವಸೆಯನ್ನು ನೀಡಿದರು .
ಇದೇ ಸಂದರ್ಭದಲ್ಲಿ ಕೊಡೆಕಲ್ ಹೋಬಳಿಯ ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ನಾರಾಯಣಪುರ ಸಂಚಾರ ನಿಯಂತ್ರಕ ಅಶೋಕ್, ಎ.ಎಸ್.ಐ ಸುಭಾಷ್ ಚಂದ್ರ, ರಿಯಾಜ್ ಸಿಬ್ಬಂದಿ ಹಾಗೂ ಕೊಡೆಕಲ್ ಪೊಲೀಸ್ ಠಾಣೆ ಎ.ಎಸ್.ಐ ಸಂಗಪ್ಪ ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ
Tags:
ಯಾದಗಿರಿ ವರದಿ
Wr
ಪ್ರತ್ಯುತ್ತರಅಳಿಸಿ