ಅಂತರ್ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ದೈಹಿಕ ಶಿಕ್ಷಣ ಶಿಕ್ಷಕರು ಸಂಸ್ಥೆಯ ಆಧಾರ ಸ್ಥಂಭವಿದ್ದಂತೆ. ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಶಿಕ್ಷಕರು ಅಂದರೆ ಬಹಳ ಅಚ್ಚುಮೆಚ್ಚು ಎಂದು ಪೂರ್ಣಪ್ರಜ್ಞಾ ಶಾಲೆಯ ಸಹ ಕಾರ್ಯದರ್ಶಿ ಪ್ರೊ: ಶ್ರೀ ಕೃಷ್ಣ ಉಪಾಧ್ಯಾಯರು ಹೇಳಿದರು. 

ಅವರು ನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಎರಡು ದಿನ ನಡೆಯಲಿ ರುವ ಅಂತರ್ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಾ, ತಮ್ಮ ಜೀವನದಲ್ಲಿ ಓದಿನ ಜೊತೆಗೆ ಶಿಸ್ತು ಅನ್ನುವಂತದ್ದು ಬಹಳ ಮುಖ್ಯ, ಓದು ಮತ್ತು ಕ್ರೀಡೆ ಎರಡನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.

ರಾಷ್ಟ್ರ ಪ್ರಶಸ್ತಿ ಶಿಕ್ಷಕ, ದೈಹಿಕ ಶಿಕ್ಷಣ ಶಿಕಕ, ಶಿವಲಿಂಗೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಕ್ರೀಡಾ ಮನೋಭಾವ ದಿಂದ ಭಾಗವಹಿಸಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ನಿರಂತರ ಅಭ್ಯಾಸದಿಂದ ಕ್ರೀಡಾಕೂಟ ದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟು ಗಳಿಗೆ ಕರೆ ನೀಡಿದರು.

ಮನಸ್ಸು ಮತ್ತು ದೇಹದ ಬೆಳವಣಿಗೆ ಯು ಸಮಾನವಾಗಿ ಬೆಳೆಯಲು ಕ್ರೀಡೆ ಸಹಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿದೆ.ಆಟಗಳು ಮತ್ತು ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿಯೇ ದೈಹಿಕ ತರಬೇತಿ, ವ್ಯಾಯಾಮ ಮತ್ತು ಆಟಗಳಿಲ್ಲದೆ – ಶಿಕ್ಷಣವು ಅಪೂರ್ಣವಾಗಿ ರುತ್ತದೆ. ಅಲ್ಲದೆ, ಶಿಕ್ಷಣದ ಜೊತೆಗೆ, ಆಟಗಳು ಸಹ ನಮ್ಮೆಲ್ಲರನ್ನೂ ಎದ್ದು ನಿಲ್ಲಲು ಮತ್ತು ಜೀವನದ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧ ಗೊಳಿಸುತ್ತವೆ. ಆಟಗಳನ್ನು ಆಡು ವಾಗ, ವಿದ್ಯಾರ್ಥಿಗಳು ಆಮ್ಲಜನಕದ ಉತ್ತಮ ಸೇವನೆಯನ್ನು ತೆಗೆದು ಕೊಳ್ಳುತ್ತಾರೆ. ಅವರ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಎಂದರು.

ಪೂರ್ಣಪ್ರಜ್ಞ ಶಾಲೆಯ ಕಾರ್ಯದರ್ಶಿ ಡಾ.ವಿನೀತ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅಮರೇಗೌಡ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಜಯಶ್ರೀ, ವಿಜಯಲಕ್ಷ್ಮಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು