ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ವಿಧಾನಸಭಾ ಕ್ಷೇತ್ರವನ್ನು ಆಕರ್ಷಣೀಯ ಪ್ರವಾಸಿಗರ ತಾಣ ಮಾಡುವ ಸಂಬಂಧ ರಾಜ್ಯ ಸರ್ಕಾರ ದಿಂದ ಆರ್ಥಿಕ ನೆರವು ದೊರಕಿಸಿಕೊಡ ಬೇಕೆಂದು ನಗರದ ಜನ್ನಾಪುರ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಸಂಸದ ಬಿ.ವೈ ರಾಘವೇಂದ್ರ ರವರು ಸ್ಪಂದಿಸಿ ರಾಜ್ಯ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳು ಹಾಗು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್ ರವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣು ಗೋಪಾಲ್ ರವರು ಭದ್ರಾವತಿ ವಿಧಾನಸಭಾ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗಾಗಿ ಕಳೆದ ಸುಮಾರು 50 ವರ್ಷಗಳಿಂದ ನಿರಂ ತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಗರಸಭೆ ವ್ಯಾಪ್ತಿ ಸರ್ವೆ ನಂ.112ರ ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪ ವಿರುವ ಸುಮಾರು 800 ವರ್ಷಗಳ ಇತಿಹಾಸ ವಿರುವ ಸುಮಾರು 50 ಎಕರೆ 20 ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಹಿರೇಕೆರೆ ಹಾಗೂ ಹಳೇನಗರದ ಪುರಾಣ ಪ್ರಸಿದ್ದ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ ಗ್ರಾಮ ಪಂಚಾಯತಿ ಸಿರಿಯೂರು ಗ್ರಾಮದಲ್ಲಿರುವ ಸಿರಿಯೂರು ಸರ್ಕಾರಿ ಕೆರೆ, ನಾಗತಿ ಬೆಳಗಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಸಮೀಪ ವಿರುವ ಸರ್ಕಾರಿ ಕೆರೆ ಮತ್ತು ಅರಳಿಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೊಂದಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸಮೀಪವಿರುವ ವಿಶಾಲ ವಾದ ಖಾಲಿ ಜಾಗ ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿಸುವುದು.
ಗೊಂದಿ ಜಲಾಶಯ ಆಕರ್ಷಣಿಯ ಪ್ರವಾಸಿಗರ ತಾಣವನ್ನಾಗಿಸುವ ಜೊತೆಗೆ ಭದ್ರಾಜಲಾಶಯ ಕೆಳಭಾಗ ದಲ್ಲಿರುವ ನೂರಾರು ಎಕರೆ ವಿಶಾಲ ವಾದ ಖಾಲಿ ಜಾಗದಲ್ಲಿ ಕೆ.ಆರ್.ಎಸ್ ಮಾದರಿಯಲ್ಲಿ ಆಕರ್ಷಣೀಯ ತಾಣವನ್ನಾಗಿಸುವುದು ಹಾಗು ಬಿಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಕಿ ಸರ್ಕಾರಿ ಕೆರೆಯನ್ನು ಆಕರ್ಷಣೀಯ ಪ್ರವಾಸಿ ಗರ ತಾಣವನ್ನಾಗಿ ಮಾಡುವಂತೆ ಒತ್ತಾಯಿಸುವ ಮೂಲಕ ಅಗತ್ಯವಿರುವ ಆರ್ಥಿಕ ನೆರವು ರಾಜ್ಯ ಸರ್ಕಾರದಿಂದ ಬಿಡುಗಡೆ ಗೊಳಿಸಿ ಕೊಡುವಂತೆ ಇತ್ತೀಚಿಗೆ ಸಂಸದರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿರುವ ಸಂಸದರು. ಹೆಚ್.ಕೆ.ಪಾಟೀಲ್ರವರಿಗೆ ಪತ್ರ ಬರೆದು ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಕೇಂದ್ರ ಸರ್ಕಾರದಿಂದ ಪ್ರವಾಸಿ ತಾಣವನ್ನಾಗಿಸಲು ಕ್ರಮವಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ದಿಂದಲೂ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿದ್ದಾರೆಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಗಿರಿನಾಯ್ಡು ತಿಳಿಸಿದ್ದಾರೆ.