ಜನರ ಸಮಸ್ಯೆ ನೋಡಲಾಗದೆ ರಸ್ತೆ ಗುಂಡಿಗಳನ್ನು ಮುಚ್ಚಿದ ಗ್ರಾ ಪಂ ಸದಸ್ಯ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹೊಳೆಹೊನ್ನೂರು ರಸ್ತೆಯಲ್ಲಿನ ಗುಂಡಿಗಳಿಂದ ಗ್ರಾಮಸ್ಥರು ಅನುಭವಿಸುತ್ತಿ ರುವ ತೊಂದರೆ ಮನಗಂಡ ಆನವೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಿಗೆ ಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ ತಾವೇ ಸ್ವತಃ ಗುಂಡಿಗಳಿಗೆ ಮಣ್ಣು ಸುರಿದು ರಸ್ತೆ ದುರಸ್ತಿ ಮಾಡಿದ್ದಾರೆ.

ಆನವೇರಿಯಿಂದ ಇಟ್ಟಿಗೆಹಳ್ಳಿ ಸಂರ್ಪಕ ಕಲ್ಪಿಸುವ ಡಾಂಬ‌ರ್ ರಸ್ತೆ ಹಲವೆಡೆ ಕಿತ್ತುಹೋಗಿತ್ತು. ಮಳೆ ನೀರು ನಿಂತು ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿ ದ್ದವು. ಇದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಓಡಾಡುವುದು ಸಹ ಕಷ್ಟವಾಗುತ್ತಿತ್ತು. ಇದ ಕಾರಣಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ 4 ಟ್ರ್ಯಾಕ್ಟರ್ ಲೋಡ್ ಮಣ್ಣು ತರಿಸಿ ಗುಂಡಿಗಳನ್ನು ಮುಚ್ಚಿದ್ದಾರೆ.

ಇಟ್ಟಿಗೆಹಳ್ಳಿಯ ನೀರುಗಂಟಿ ಪರುಶುರಾಮ್ ಹಾಗೂ ಆನವೇರಿ ಗ್ರಾಮ ಪಂಚಾಯಿತಿ ಕರವಸೂಲಿಗಾರ ರಘು ಹಾಗೂ ಇಟ್ಟಿಗೆಹಳ್ಳಿ ಯುವಕ ಸುನೀಲ್ ಅವರು ತಿಪ್ಪೇಶ್ ನೆರವಿಗೆ ಬಂದಿದ್ದಾರೆ. ಗುಂಡಿಗಳಿಗೆ ಮಣ್ಣು ಸುರಿದು ಓಡಾಟಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಪಂ ಸದಸ್ಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು