ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಿಂದೂ ಧರ್ಮದ ಒಡಲಾಳದಲ್ಲಿ ಸಾವಿರಾರು ವರ್ಷಗಳಿಂದ ಹುದುಗಿದ್ದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹಾಗೂ ವರ್ಣ ವ್ಯಸ್ಥೆಯಿಂದಾಗಿ ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂಥಾಗಿತ್ತು. ಆದರೆ ಡಾ. ಅಂಬೇಡ್ಕರ್ ಅವರ ಸಂವಿಧಾನದ ಜಾರಿಯಿಂದಾಗಿ ಸ್ವಾತಂತ್ರ್ಯ, ಸಮಾನತೆ ಗಳಿಂದ ಕೂಡಿದ ಜಾತ್ಯಾತೀತ ರಾಷ್ಟವಾಗಿ ಭಾರತ ಹೊರಹೊಮ್ಮಲು ಕಾರಣ ವಾಯಿತು ಎಂದು ನಿವೃತ್ತ ಪ್ರಾಚಾರ್ಯ ಶಿವಬಸಪ್ಪ ಅಭಿಪ್ರಾಯ ಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ಭದ್ರಾವತಿ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು, 'ವೇದ, ಉಪನಿಷತ್ತು, ಶಾಸ್ತ್ರ, ಪುರಾಣ ಗಳಿಂದ ದಲಿತರು ಕಲಿಯಬೇಕಾಗಿದ್ದು ಏನು ಇಲ್ಲ ಎಂದರು.
ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು. ದಸಂಸ ಮುಖಂಡರಾದ ಆರ್.ತಮ್ಮಯ್ಯ, ಬಿ.ಕೃಷ್ಣಪ್ಪ, ಕಾಚಗೊಂಡನ ಹಳ್ಳಿ ನಾಗರಾಜ್, ಲಿಂಗರಾಜು, ಚನ್ನಪ್ಪ, ಮುತ್ತು, ಸಿರಿಯೂರು ಜಯಣ್ಣ, ಶ್ರೀನಿವಾಸ್, ಕಡದ ಕಟ್ಟೆ ರಾಜಶೇಖರ್, ಶಿಕ್ಷಕ ನರಸಿಂಹಮೂರ್ತಿ, ಶಿವಣ್ಣ ಮುಂತಾದವರು ಭಾಗವಹಿಸಿದ್ದರು. ಕಾಂಚಗೊಂಡನಹಳ್ಳಿ ನಾಗರಾಜ್ ಸ್ವಾಗತಿಸಿ. ಎಸ್.ಮುತ್ತು ವಂದಿಸಿದರು.
Tags
ಭದ್ರಾವತಿ ದಸಂಸ ವರದಿ