ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮಲ್ಲಾಪುರ ಬಳಿ ಬೈಕ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಹೊನ್ನಾಳಿ ತಾಲೂಕು ಲಿಂಗಪುರ ಗ್ರಾಮದ ಭುವನ (18) ಎನ್ನಲಾಗಿದ್ದು, ಮೃತ ನಿಗೆ ತಾಯಿ ಹಾಗು ತಂಗಿ ಮಾತ್ರ ಇದ್ದು ತಂದೆ 2 ವರ್ಷಗಳ ಹಿಂದೆ ಮರಣ ಹೊಂದಿದ್ದು ತಾಯಿಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ,
ಗೋಬಿ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಗ ಮನೆಗೆ ಆಸರೆ ಆಗುವ ನೆಂಬ ಆಶಯ ದೊಂದಿಗೆ ಕಾಯುತ್ತಿದ್ದ ತಾಯಿಗೆ ಆಘಾತಕಾರಿ ಸುದ್ದಿ ಬರ ಸಿಡಿಲು ಬಡಿದಂತಾಗಿದೆ.