ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕೇಂದ್ರ ಕಾರ್ಯಾಲಯ ಶ್ರೀ ಗಂಗಾಪರ ಮೇಶ್ವರಿ ಸಮುದಾಯ ಭವನದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಒಕ್ಕೂಟದ ಅಧ್ಯಕ್ಷ ವಿನೋದ್ ವಿ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಒಕ್ಕೂಟದ ಆಯವ್ಯಯ ಹಾಗೂ ವಾರ್ಷಿಕ ವರದಿ ಮಂಡಿಸಿ ನಂತರ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯಲಾಗಿ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ವಿನೋದ್ ವಿ. ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆ ಯಾದರೆ,ಉಪಾಧ್ಯಕ್ಷರಾಗಿ ಸುರೇಶ್, ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಜಯಪ್ಪ, ಕಾರ್ಯದರ್ಶಿಯಾಗಿ ರಮೇಶ್. ಸಹ ಕಾರ್ಯದರ್ಶಿ ಆಶೀರ್ವಾದ,ಖಜಾಂಚಿ ಸುಶೀಲ ಆಯ್ಕೆಯಾದರು. ಶಶಿಕುಮಾರ್, ಪವಿತ್ರ,ವೆಂಕಟೇಶ್,ಮೋಹನ್, ಜಗನ್ನಾಥ್. ನೇತ್ರಾವತಿ, ಭಾಗ್ಯ,ಸಂದೇಶ ಪೈ, ಗೌರವ ಸಲಹೆಗಾರರಾಗಿ ಬಿ ಆರ್ ಯಲ್ಲಪ್ಪ, ರಾಮಾಚಾರಿ ಆಯ್ಕೆ ಮಾಡಲಾಯಿತು.

ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೆಂದಿಲ್ ಕುಮಾರ್, ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ಅವಿನಾಶ್. ಉಪಾಧ್ಯಕ್ಷರಾಗಿ ತೇಜು ನಾಯಕ್,ಗ್ರಾಮಾಂತರ ಅಧ್ಯಕ್ಷರಾಗಿ ವಸಂತ್ ರಾವ್, ನಗರ ಅಧ್ಯಕ್ಷರಾಗಿ ಜಾರ್ಜ್ ಮಾರ್ಟಿನ್, ಮಹಿಳಾ ಅಧ್ಯಕ್ಷ ಮಂಜುಳಾ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿ ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಬೈಲಾ ನಿಯಮ ಹಾಗೂ ಸರ್ವ ಸದಸ್ಯರುಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ವಿ ವಿನೋದ್ ಮಾತನಾಡಿ, ಒಕ್ಕೂಟವು ಕಳೆದ ಮೂರು ವರ್ಷಗಳಿಂದ ಕಾರ್ಮಿಕರಿಗಳಿಗೆ ಸ್ಪಂದಿಸಿರುವ ಬಗ್ಗೆ ಸವಿಸ್ತಾರವಾಗಿ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಹಾಗೂ ವೃತ್ತಿಪರ ಕಾರ್ಮಿಕರಿಗಳಿಗೆ ಕಿಟ್ಟುಗಳು,ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ ಹಾಗೂ ಇನ್ನಿತರೇ ಸಹಾಯಧನಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ಕೊಡಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ನೇತ್ರಾವತಿ ಸ್ವಾಗತಿಸಿದರೆ,ಜಯಪ್ಪ ನಿರೂಪಿಸಿ ನೆರವೇರಿಸಿ, ಶಶಿಕುಮಾರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು