ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿ ಸಿದ ಕೇಂದ್ರ ಸಚಿವ ಅಮಿತ್ ಷಾ ತನ್ನ ನಿಜ ಬಣ್ಣ ಬಯಲು ಮಾಡಿಕೊಂಡಿ ದ್ದಾರೆ. ಇವರು ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಕೂರಲು ಯೋಗ್ಯರಲ್ಲ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಒತ್ತಾಯಿಸಿದರು.
ಅವರು ತಾಲೂಕು ಕಚೇರಿ ಆವರಣ ದಲ್ಲಿ ದಸಂಸ ಏರ್ಪಡಿಸಿದ್ದ ಪ್ರತಿಭಟನೆ ಯಲ್ಲಿ ಮಾತನಾಡಿ ಅಮಿತ್ ಷಾ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಂಬೇಡ್ಕರ್ ಬಗ್ಗೆ ನಿಜವಾದ ಗೌರವ ಇದ್ದರೆ ಕೂಡಲೆ ಅಮಿತ್ ಷಾ ಅವರಿಂದ ರಾಜೀನಾಮೆ ಪಡೆಯ ಬೇಕು. ಇಲ್ಲದಿದ್ದಲ್ಲಿ ಸಂಪುಟದಿಂದ ವಜಾಗೊಳಿಸಬೇಕು. ಅವರನ್ನು ಸಂಪುಟದಿಂದ ಕಿತ್ತು ಹಾಕುವವರೆಗೂ ನಡೆಯುವ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ.ಅಮಿತ್ ಷಾ ಭಾರತೀಯರ ಕ್ಷಮೆಯನ್ನೂ ಕೇಳಬೇಕೆಂದರು.
ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ ಮಾತನಾಡಿ ಸದನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಹೀಯಾಳಿಸಿ ಮಾತನಾಡಿ ಅವಮಾನ ಮಾಡಿರುವ ಅಮಿತ್ ಷಾ ಅವಮಾನ ಮಾಡಿರುವುದು ಇದೇ ಮೊದಲಲ್ಲ. ದೇವರು ಧರ್ಮದ ಹೆಸರಲ್ಲಿ ರಾಜಕೀಯ ದುರ್ಲಾಭ ಪಡೆಯುವು ದೊಂದೇ ಬಿಜೆಪಿ ಮತ್ತು ಸಂಘ ಪರಿವಾರದ ಏಕೈಕ ಗುರಿಯಾಗಿದೆ. ಅವರು ಸಚಿವ ಸ್ಥಾನದಲ್ಲಿ ಒಂದು ನಿಮಿಷವೂ ಇರಲು ಯೋಗ್ಯತೆಯಿಲ್ಲ ವೆಂದು ಖಂಡಿಸಿ ರಾಜೀನಾಮೆಗೆ ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಏಳುಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ತಮ್ಮಯ್ಯ, ಮುಖಂಡರಾದ ಬಿ.ಕೃಷ್ಣಪ್ಪ, ನಾಗರಾಜ್, ರಮೇಶ್ ಚಿಕ್ಕರಡಿ, ರವಿ, ರಾಜಶೇಖರ್, ಶ್ರೀನಿವಾಸ್ ಮುಂತಾದವರಿದ್ದರು.
ಪ್ರತಿಭಟನೆಯು ಆರಂಭದಲ್ಲಿ ರಂಗಪ್ಪ ವೃತ್ತದಲ್ಲಿ ನಡೆಯಿತು. ನಂತರ ತಾಲೂಕು ಕಚೇರಿಯ ಆವರಣಕ್ಕೆ ಬಂದು ಪ್ರತಿಭಟಿಸಿ ತಹಸೀಲ್ದಾರ್ ಪರಶುರಾಮ್ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಲಾಯಿತು.
Tags:
ಭದ್ರಾವತಿ ದಸಂಸ ಪ್ರತಿಭಟನೆ