ವಿಜಯ ಸಂಘರ್ಷ ನ್ಯೂಸ್
ಹುಣಸಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಅಶೋಕ ರಾಜನಕೋಳೂರ ಅವರ ಮನೆಯಲ್ಲಿ, "ಮನೆಯಲ್ಲಿ ಮಹಾಮನೆ" ಎಂಬ ಕಾರ್ಯಕ್ರಮ ನಡೆಯಿತು.
84 ಲಕ್ಷ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಎನಿಸಿಕೊಂಡಿದ್ದಾನೆ, ಆದರೆ ಆತನ ದುರಾಸೆಯಿಂದಾಗಿ, ಅರಷಡ್ವರ್ಗಗಳಿಂದಾಗಿ ಎಲ್ಲಾ ಜೀವಿಗಳಿಗಿಂತ ಕನಿಷ್ಟನಾಗುತ್ತಿದ್ದಾನೆ.
ಗುಳಬಾಳ ಆನಂದಾಶ್ರಮದ ಪೂಜ್ಯ ಶ್ರೀ ಮರಿಹುಚ್ಚೇಶ್ವರ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿ, ಮನ ಶಾಂತಿಗಾಗಿ ಯೋಗ ಧ್ಯಾನ, ಪುರಾಣ ಪ್ರವಚನಗಳು ಅವಶ್ಯ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಬದುಕು ಸಾರ್ಥಕ ವಾಗುತ್ತದೆ ಎಂದರು.
ಕೆಂಭಾವಿಯ ನಾಗರಾಜ ಶಾಸ್ತ್ರೀಗಳು ವಿಶೇಷ ಪ್ರವಚನ ನೀಡುತ್ತಾ ಶರಣರ ತತ್ವಗಳು ಹಾಗೂ ಶರಣ ಮುಗ್ದ ಸಂಗಯ್ಯನ ಜೀವನ ಮತ್ತು ಆದರ್ಶಗಳ ತಿಳಿಸಿಕೊಟ್ಟರು.
ಈ.ಸಂಧರ್ಭದಲ್ಲಿ ಪರಿಷತ್ ನ ತಾಲ್ಲೂಕಾ ಅಧ್ಯಕ್ಷ ಶಿವಕುಮಾರ ಬಂಡೋಳಿ, ಪೂಜ್ಯ ಸಂಗಣ್ಣ ಶರಣರು, ಆಧ್ಯಾತ್ಮಿಕ ಜೀವಿ ಜಿ ಎಸ್ ಗೂಡಲಮನಿ, ಆರ್. ಎಲ್.ಸುಣಗಾರ, ಭೀಮರಾವ್ ಕುಲಕರ್ಣಿ, ಬಸಪ್ಪ ಶರಣರ, ಯಲ್ಲಪ್ಪ ಚಂದನಕೇರಿ, ಶರಣಗೌಡ ಗೆಣ್ಣೂರ, ರಾಚಪ್ಪ ಜಾಲಿಗಿಡದ, ದಯಾನಂದ ಮಠ, ಗುರಣ್ಣಗೌಡ, ಶಿವಾನಂದ ತೋಟದ, ಕಾಶೀನಾಥ ಹೊಸಮಠ, ರವಿ ಭಂಟನೂರ, ಶಿವಲೀಲಾ ಮುರಾಳ, ಮಹಾದೇವಿ ರೇಶ್ಮಿ, ಸುನಿತಾ ಸಜ್ಜನ ಉಪಸ್ಥಿತರಿದ್ದರು.
ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ಮಕ್ಕಳು ಪ್ರಾರ್ಥಿಸಿದರೆ, ಅಶೋಕ ರಾಜನಕೋಳೂರ ಸ್ವಾಗತಿಸಿ, ಕಾಂತೇಶ ಹಲಗಿಮನಿ ನಿರೂಪಿಸಿ,ಅಕ್ಕಮಹಾದೇವಿ ದೇಶಮುಖ ವಂದಿಸಿದರು.
(✍️ ವರದಿ ಶಿವು ರಾಠೋಡ )
Tags:
ಹುಣಸಗಿ ವರದಿ