ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಡಿ.1ರ ರಾತ್ರಿ ರತ್ನಾಪುರ ಗ್ರಾಮದ ಮಂಜ ಅಲಿಯಾಸ್ ಕುಳ್ಳಮಂಜ ಎಂಬುವರ ಮನೆಯ ಮುಂದೆ ಮಾಟಮಂತ್ರ ಮಾಡಲಾಗಿದ್ದು,ಯಾರು ಎಂಬುದು ತಿಳಿದಿಲ್ಲ. ಅದೇ ದಿನ ದೇವಸ್ಥಾನಕ್ಕೆಂದು ಹೊರ ಜಿಲ್ಲೆಗೆ ಹೋಗಿದ್ದ ಮಂಜ ಹಾಗೂ ಅವರ ಮನೆ ಯವರು ಮನೆಯಲ್ಲಿ ಇಬ್ಬರು ಮಕ್ಕಳು ಮಾತ್ರ ಇದ್ದು, ಮಧ್ಯರಾತ್ರಿ ಅವಘಡ ನಡೆದಿದೆ. ಸ್ಥಳದಲ್ಲಿ ಮೀನುಗಳು, ಮೊಟ್ಟೆಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು ಇನ್ನಿತರ ಪದಾರ್ಥಗಳು ಪತ್ತೆಯಾಗಿವೆ.
ಬಾಳೆಹಣ್ಣಿನಲ್ಲಿ ವಿಕೃತವಾಗಿ ಬರೆದ ಹೆಸರುಗಳು ಹಾಗೂ ಅವರ ಕುಟುಂಬ ಗಳು ನಾಶವಾಗಲಿ ಎಂದು ಬರೆದಿರುತ್ತಾರೆ. ಇದರಿಂದ ಅವರ ಕುಟುಂಬ ಭಯಭೀತ ರಾಗಿದ್ದು, ಅಕ್ಕಪಕ್ಕದ ಮನೆಯವರು ಸಹಿತ ಭಯಭಿತರಾಗಿದ್ದಾರೆ. ಪೊಲೀಸರು ರಾತ್ರಿ ವೇಳೆ ಗ್ರಾಮಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
Tags
ಭದ್ರಾವತಿ ವರದಿ