ಕೇಂದ್ರ ಗೃಹ ಸಚಿವ ಅಮೀತ್ ಷಾ ರಾಜೀನಾಮೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪ್ರಜಾಪ್ರಭುತ್ವ ರಾಷ್ಟ್ರದ ಸಂವಿದಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಸಂಸತ್ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ್ ಷಾ ರವರ ಸಂಸತ್ ಸದಸ್ಯತ್ವವನ್ನು ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು.

ಶುಕ್ರವಾರ ನಗರದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ. ಸರ್ಕಾರದಲ್ಲಿ ಗೃಹಮಂತ್ರಿ ಯಾಗಿರುವ ಅಮೀತ್ ಷಾ ರವರು ಸಂಸತ್ ನಲ್ಲಿ ಬಾಷಣ ಮಾಡುವಾಗ ವಿರೋಧ ಪಕ್ಷದ ನಾಯಕರು, ಪದೆ ಪದೆ ಸಂವಿಧಾನ ಮತ್ತು ಅಂಬೇಡ್ಕರ್ ರವರ ಭಾವ ಚಿತ್ರಗಳನ್ನು ಪ್ರದರ್ಶಿಸುವುದನ್ನು ಸಹಿಸಿಕೊಳ್ಳದೆ ತಮ್ಮ ಭಾಷಣದಲ್ಲಿ, ಈಗ ಒಂದು ಪ್ಯಾಷನ್ ಶುರುವಾಗಿದೆ ಅಂಬೇಡ್ಕರ್, ಅಂಬೇಡ್ಕರ್ ಎಂದು ಇಷ್ಟು ಸಲ ಹೇಳುವ ಬದಲು ಒಂದು ವೇಳೆ ಭಗವಂತನ ಹೆಸರು ಹೇಳಿದ್ದರೆ ಸ್ವರ್ಗನಾದರೂ ಸಿಗುತ್ತಿತ್ತು ಎಂದು ಹೇಳಿರುವುದು ಮನವಾದಿ ಬಿ.ಜೆ.ಪಿ. ಸರ್ಕಾರಕ್ಕೆ ಅಂಬೇಡ್ಕರ್ ರವರ ಬಗ್ಗೆ ಇರುವ ಸಂಕುಚಿತ ಮನೋಭಾವ ತಿಳಿಯುತ್ತದೆ ಎಂದರು.

ಸಂವಿಧಾನ ಶಿಲ್ಪಿಗೆ ಮನವಾದಿಗಳು ಮಾಡುವ ಅಪಮಾನಗಳು ತಮ್ಮ ಮಾತುಗಳಿಂದ ಬಹಿರಂಗಗೊಂಡಿದೆ. ಪ್ರಜಾಪ್ರಭುತ್ವ ಭಾರತದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಈ ದೇಶದ ಸಂವಿಧಾನದ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಂತಹ ದರಲ್ಲಿ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿರುವುದು ಖಂಡನಿಯ. 

ಇಡೀ ವಿಶ್ವ ಮೆಚ್ಚು ವಂತಹ ದೇಶ ದಲ್ಲಿನ 136 ಕೋಟಿ ಜನರು ಸಾಮಾಜಿಕ ಸಮಾನತೆ ಹಾಗೂ ಬ್ರಾತೃತ್ವ ದಿಂದ ಜೀವಿಸಲು ಸಮಾನತೆ ಯ ಸಂದೇಶ ವನ್ನು ಸಾರಿದ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸುವಂತಹ ಸಂದರ್ಭದಲ್ಲಿ ಸಂವಿಧಾನ ನಿರ್ಮಾಣ ಕರ್ತನನ್ನು ಹೀಯಾಳಿಸುವುದು ಎಷ್ಟು ಸರಿ. ಈತನ ಹೇಳಿಕೆಯು ದೇಶದ್ರೋಹಿ ಕೃತ್ಯಕ್ಕೆ ಸಮ ಆದ್ದರಿಂದ ಈ ರೀತಿ ದೇಶ ದ್ರೋಹದ ಹೇಳಿಕೆ ನೀಡಿರುವ ಅಮೀತ್ ಷಾ ರವರು ಈ ದೇಶದಲ್ಲಿ ಇರಲು ಯೋಗ್ಯರಲ್ಲ. ಈ ಕೂಡಲೇ ಅಮೀತ್ ಷಾ ರವರು ದೇಶದ ಕ್ಷಮೆಯಾಚಿಸ ಬೇಕು ಎಂದು ಕಿಡಿಕಾರಿದರು.

ಕೂಡಲೇ ಪ್ರಧಾನಿ ನರೇಂದ್ರ ಮೋದಿ ಯವರು ಅಮೀತ್ ಷಾ ರವರನ್ನು ಸಂಪುಟದಿಂದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆಯಬೇಕು ಹಾಗೂ ರಾಷ್ಟ್ರಪತಿಗಳು ಅಮೀತ್ ಷಾ ರವರ ಸಂಸತ್ ಸದಸ್ಯತ್ವ ಸ್ಥಾನವನ್ನು ವಜಾ ಒಕ್ಕೂರಿಲಿನಿಂದ ಒತ್ತಾಯಿಸಿ ಉಪ ತಹಸೀಲ್ದಾರ್ ಅರಸು ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ದಸಂಸ ಮುಖಂಡ ರಾದ ಚಿನ್ನಯ್ಯ,ಈಶ್ವರಪ್ಪ, ಪರಮಿ, ಕುಬೆಂದ್ರಪ್ಪ, ಆರ್.ಸಂದೀಪ್, ಕೆ.ರಂಗನಾಥ, ಏಳುಮಲೈ, ಕಾಣಿಕ್ ರಾಜ್, ಮಣಿ ಜಿಂಕ್ ಲೈನ್, ಎನ್. ಗೋವಿಂದ, ಸುವರ್ಣಮ್ಮ,ರೇಖಾ, ದಾಸ್, ನಗರಸಭಾ ಸದಸ್ಯ ಸಂತೋಷ್ ಕುಮಾರ್, ಕಾಂಗ್ರೆಸ್ ಪಕ್ಷದ ಬಿ.ಎಸ್.ಗಣೇಶ್, ಅಮೀರ್ ಜಾನ್, ದಿಲ್ದಾರ್, ಲಕ್ಷ್ಮೀದೇವಿ, ಜುಂಜಾನಾಯ್ಕ, ಸಿ.ಜಯಪ್ಪ, ಗೋಪಿ ಸೇರಿದಂತೆ ಅನೇಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು