ಭದ್ರಾವತಿ-ಒತ್ತುವರಿ ಕೆರೆ ತೆರವು ಮುಖಂಡರಿಂದ ಅಧಿಕಾರಿಗಳಿಗೆ ಅಭಿನಂದನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಹೋಬಳಿಯ ಕುಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 82 ರಲ್ಲಿ ಒತ್ತುವರಿಯಾಗಿದ್ದ 26ಗುಂಟೆ ಸರ್ಕಾರಿ ಕೆರೆಯನ್ನು ಕಂದಾಯ ಇಲಾಖಾಧಿಕಾರಿಗಳು ನೇತೃತ್ವದಲ್ಲಿ ತೆರವು ಗೊಳಿಸಲಾಯಿತು.

ಪಿಡಿಒ ಕೇಶವ ಮೂರ್ತಿ, ರಾಜಸ್ವ ನಿರೀಕ್ಷಕ ಜಗನ್ನಾಥ್, ಗ್ರಾಮ ಲೆಕ್ಕಾಧಿಕಾರಿ ಜ್ಞಾನೇಶ್, ಸರ್ವೆ ಇಲಾಖೆಯ ರಾಜಶೇಖರಯ್ಯ ಹಾಗೂ ಸಿಬ್ಬಂದಿ ವರ್ಗ ತೆರವು ಕಾರ್ಯದಲ್ಲಿ ಭಾಗವಹಿಸಿದ್ದರು.

ಕೆಆರ್ ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ತೀರ್ಥೇಶ್, ಕಾರ್ತಿಕ್, ಡಿಎಸ್ಎಸ್ ಮುಖಂಡರಾದ ನಾಗರಾಜ್. ಕಬಳಿಕಟ್ಟೆಯ ಮಂಜುನಾಥ್, ಭಂಡಾರಹಳ್ಳಿ ಕಿರಣ್, ಜೈ ಕರ್ನಾಟಕ ಸಂಘದ ಮುಕುಂದ, ಸಾಮಾಜಿಕ ಹೋರಾಟಗಾರರಾದ ಕೆಂಚೇನಹಳ್ಳಿ ಶ್ರೀನಿವಾಸ್ ಮತ್ತಿರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು