ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ರಾಜ್ಯದ ವಿವಿದೆಡೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಲಾರಿ ಚಾಲಕನಿಂದ ನಗರದ ಸಂಚಾರಿ ಠಾಣೆ ಪೊಲೀಸರು ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಹಾಗು ಸಿಬ್ಬಂದಿಗಳು ವಾಹನಗಳ ತಪಾಸಣೆ ಕರ್ತವ್ಯ ನಿರ್ವಹಣೆ ಯಲ್ಲಿದ್ದಾಗ ರಾಜ್ಯದ ವಿವಿಧೆಡೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಲಾರಿ ಚಾಲಕ ನೋರ್ವ ಸಿಕ್ಕಿಬಿದ್ದಿದ್ದು, ಈ ಚಾಲಕನ ವಿರುದ್ಧ ರಾಜ್ಯದ ವಿವಿಧೆಡೆ ಒಟ್ಟು 10 ಐಎಂವಿ ಪ್ರಕರಣಗಳು ದಾಖಲಾಗಿ ರುವ ಮಾಹಿತಿ ಬಂದಿದೆ. ತಕ್ಷಣ ಚಾಲಕನಿಂದ ಒಟ್ಟು 5 ಸಾವಿರ ರೂ ದಂಡ ವಸೂಲಾತಿ ಮಾಡಲಾಗಿದೆ.
ರಾಜ್ಯದ ಬೇರೆಡೆ ರಸ್ತೆ ಸಂಚಾರಿ ನಿಯಮ ಉಲ್ಲಂಘಿಸಿರುವ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಯಾವುದೇ ಸಂಚಾರಿ ಠಾಣೆಯಲ್ಲಿ ದಂಡ ಪಾವತಿಸ ಬಹುದಾಗಿದೆ. ನಗರದಲ್ಲೂ ಈ ಸೌಲಭ್ಯವಿದ್ದು, ಸಾರ್ವಜನಿಕರು ಸದುಪಯೋಗಪಡೆದು ಕೊಳ್ಳುವಂತೆ ಠಾಣಾಧಿಕಾರಿ ಶಾಂತಲ ಕೋರಿದ್ದಾರೆ.