ರೈತರು-ಮಾಜಿ ಸೈನಿಕರಿಗೆ ನವೋತ್ಸವದಲ್ಲಿ ಗೌರವ ಸಮರ್ಪಣೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕಡದಕಟ್ಟೆ ನವಚೇತನ ಹಾಗೂ ದಿವ್ಯಾಸಂಸ್ಥೆ ವತಿಯಿಂದ ನಡೆದ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಶೃತಿ ವಸಂತ್, ಗೀತಾ ರಾಜಕುಮಾರ್, ಕೆ.ಎಂ.ಎಫ್ ನಿರ್ದೇಶಕ ಕೆಂಚನಹಳ್ಳಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಮೀನ್ದಾರ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ನಿಂಗಪ್ಪ, ನಿವೃತ್ತ ಶಿಕ್ಷಕ ಜಿ.ಉಮೇಶ್ವರಪ್ಪ,ಸಿ.ಆರ್.ಪಿ. ನಂದಿನಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಎನ್.ಪಿ.ಎಸ್ ಅಧ್ಯಕ್ಷ ಎ.ರಂಗನಾಥ, ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮುಷಬೀರ್ ಭಾಷಾ, ಸಂಸ್ಥೆಯ ಗೌರವ ಸಲಹೆಗಾರರಾದ ಗೀತಾಬಾಲಿ ಸಿದ್ದೇಶ್ವರ,ಅಧ್ಯಕ್ಷ ಎಸ್.ವಿನಯ್, ಕಾರ್ಯದರ್ಶಿ ಎಸ್. ವಿವೇಕ್, ಶಾಲಾ ಶಿಕ್ಷಕರು ಭಾಗವಹಿಸಿದ್ದರು.

ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಿಕ್ಷಕ ಹೆಚ್.ಡಿ ಸುವರ್ಣ ಸ್ವಾಗತಿಸಿ, ಬಿ.ಎಂ ಲಿಂಗರಾಜ್ ನಿರೂಪಿಸಿದರೆ,ಕೆ.ಎಸ್.ಮಂಜುನಾಥ್ ವಂದಿಸಿದರು. 

ರೈತ ಅಶೋಕ್, ಮಾಜಿ ಸೈನಿಕ ದೇವರಾಜು, ನವಚೇತನ ಶಾಲೆಯ ನಿವೃತ್ತ ಶಿಕ್ಷಕ ಎಂ.ಚನ್ನೇಶ್ವರಪ್ಪ ಹಾಗೂ ಕಳೆದ ವರ್ಷ ಎಸ್ಎಸ್ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು