ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ :ಹಳೆನಗರ,ನ್ಯೂಟೌನ್ ,ಹೊಸಮನೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳು ಹಾಗೂ ಆಶಾ ಜ್ಯೋತಿ ರಕ್ತ ಕೇಂದ್ರ ಸಂಸ್ಥೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಳೆ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಎಸ್ ಪಿ ಡಿ.ಕೆ.ಮಿಥುನ್ ಕುಮಾರ್ ಶಿಬಿರದ ಉದ್ಘಾಟನೆ ನೆರವೇರಿಸಿದರು. ಎ ಎಸ್ ಪಿ ಅನಿಲ್ ಕುಮಾರ್ ಭೂಮಿರೆಡ್ಡಿ ಹಾಜರಿದ್ದರು,ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸೇರಿ 65ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಡಿ ವೈ ಎಸ್,ಪಿ ಕೆ. ಆರ್.ನಾಗರಾಜ್ ಹಳೇನಗರ ಪಿ ಎಸ್ ಐ ಚಂದ್ರಶೇಖರ, ಹೊಸಮನೆ ಪಿಎಸ್ಐ, ಕೃಷ್ಣಕುಮಾರ್, ಜಗದೀಶ್ ಹಂಚಿನಾಳ ಪಿ ಐ ಗ್ರಾಮಾಂತರ ಪೊಲೀಸ್ ಠಾಣೆ ಹಾಗು ಇತರೆ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸೇರಿ 65ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಶಿಬಿರದ ಯಶಸ್ಸಿಗೆ ಕಾರಣಿ ಭೂತರಾದ ಎಲ್ಲರಿಗೂ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಧನ್ಯವಾದ ಅರ್ಪಿಸಿದ್ದಾರೆ.