ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ತಾಲ್ಲೂಕಿನ ನಗರ/ಗ್ರಾಮೀಣ ಉಪ ವಿಭಾಗಗಳ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ಜ.23ರ ಗುರುವಾರ ಬೆ.9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ಎಲ್ಲೆಲ್ಲಿ ಗಮನಿಸಿ:
ಹಳೇನಗರ, ತಾಲ್ಲೂಕು ಕಛೇರಿ ರಸ್ತೆ, ಅಂಬೇಡ್ಕರ್ ನಗರ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿನ ಬಾಗಿಲು, ಹಳ್ಳದಮ್ಮನವರ ಬೀದಿ, ಖಾಜಿ ಮೊಹಲ್ಲಾ, ಭೂತನಗುಡಿ, ಹೊಸ ಸೇತುವೆರಸ್ತೆ, ಸಿದ್ದಾರೂಢ ನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಹೊಳೆ ಹೊನ್ನೂರು ರಸ್ತೆ, ಖಲಂದರನಗರ, ಜಟ್ ಪಟ್‌ನಗರ, ಅನ್ವರ್ ಕಾಲೋನಿ, ಮೊಮಿನ್‌ಮೊಹಲ್ಲಾ, ಅಮೀರ್ ಜಾನ್ ಕಾಲೋನಿ, ಮಾಗೇನಹಳ್ಳಿ ಗೌಡರ ಹಳ್ಳಿ, ದಾಬಳ್ಳಿ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ, ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ ಗ್ರಾಹಕರು ಸಹಕರಿಸಲು ಕೋರಲಾಗಿದೆ.