ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ: ಉಪಾಧ್ಯಕ್ಷರ ಅವಿರೋಧ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಎಲ್.ಕೆ ಲತಾ, ಉಪಾಧ್ಯಕ್ಷರಾಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆಂದು ಚುನಾವಣಾಧಿಕಾರಿ ಇಮ್ಮಿಯಾಜ್ ಅಹಮದ್‌ ತಿಳಿಸಿದ್ದಾರೆ.
 
ನಿರ್ದೇಶಕರಾದ ಡಿ. ಮುರಳೀಧರ, ಎಂ.ಪುಟ್ಟುಲಿಂಗಮೂರ್ತಿ, ಎಸ್.ಟಿ ಸುಧೀಂದ್ರ ರೆಡ್ಡಿ, ಶಹತಾಜ್ ಪರ್ವೀನ್, ಎಂ. ಹನುಮಂತಪ್ಪ, ಆರ್. ಜಯಸ್ವಾಮಿ, ಜಿ.ಎಸ್ ರುದ್ರೇಶ್, ಎಸ್. ಆನಂದ್, ಎಚ್. ರುದ್ರೇಶ್, ವಿ. ಗದ್ದಿಗೆ ಸ್ವಾಮಿ, ಎಲ್.ಓ ಲೋಕೇಶ್‌ ಪಾಲ್ಗೊಂಡಿದ್ದರು.

ನೂತನ ಆಡಳಿತ ಮಂಡಳಿಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪದಾಧಿಕಾರಿ ಗಳಾದ ಎಸ್.ಕೆ ಮೋಹನ್, ಕೆ.ಆರ್ ಪ್ರಶಾಂತ್, ಎಂ. ವೆಂಕಟೇಶ್, ವೈ.ಎನ್ ಶ್ರೀಧರಗೌಡ, ಎ. ರಂಗನಾಥ್ ಮತ್ತು ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಕಾರ್ಯದರ್ಶಿ ಎಂ.ಎಸ್ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು