ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ : ಮರಾಠ ಸಮಾಜದ ವತಿಯಿಂದ ಹಾಗೂ ಶ್ರೀಛತ್ರಪತಿ ಶಿವಾಜಿ ಮರಾಠ ಟ್ರಸ್ಟಿನ ವತಿಯಿಂದ ಶಿವಮೊಗ್ಗ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಮಾಜದ ಯುವ ಮುಖಂಡ ಎನ್.ಕೆ.ಜಗದೀಶ್ ರವರಿಗೆ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಕರ್ನಾಟಕ ಕ್ಷತ್ರಿಯ ಮರಾಠ ಅಧ್ಯಕ್ಷ ಪರಿಷತ್ತು ಇದರ ಅಧ್ಯಕ್ಷ ಚಂದ್ರು ರಾವ್ ಗಾರ್ಗಿ, ಕಾರ್ಯದರ್ಶಿ ಚುಡಾಮಣಿ ರಾವ್ ಪವರ್, ಸುರೇಶ್ ಬಾಬು, ದಿನೇಶ್ ರಾವ್, ರಾಜಕುಮಾರ್ ಬಲರಾಮ್, ತುಕಾರಾಂ, ರಮೇಶ್ ಘಾಟಿಗೆ, ಜಗದೀಶ್, ಆಶಾ ತನ್ವಿಲ್ಕರ್ ಮತ್ತು ಮರಾಠ ಸಮಾಜದ ಬಾಂಧವರು, ಮುಖಂಡರು ಸೇರಿ ಸನ್ಮಾನಿಸಿದರು.