ಭದ್ರಾವತಿ-7ನೇ ವೇತನ ಆಯೋಗ: ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಮನವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕರ್ನಾಟಕ ನಿವೃತ್ತ ನೌಕರರ 25 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧ ಗಳನ್ನು ಪಾವತಿಸುವಂತೆ ತಾಲ್ಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿ ಗಳು ಗ್ರೇಡ್-2 ತಹಶೀಲ್ದಾರ್ ಮಂಜನಾಯ್ಕ ಹಾಗೂ ಉಪ ತಹಸೀಲ್ದಾರ್ ಅರಸ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪ್ರಮುಖರು ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ ನೌಕರರಂತೆ,  2022ರ ಜು.1 ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯ ಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತ (One Time Settlement) ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ನಾವುಗಳು ರಾಜ್ಯ ಸರ್ಕಾರ ವನ್ನು ಒತ್ತಾಯಿಸಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ನಡೆದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ 2024ರ ಡಿ.16 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿ ಸಿದ್ದ 20 ಸಾವಿರಕ್ಕೂ ಅಧಿಕ ನೌಕರರು ಸಮಾವೇಶಗೊಂಡ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿಯವರು ಸರಕಾರದ ವತಿಯಿಂದ ನಮ್ಮ ಮನವಿ ಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಸಚಿವರೊಂದಿಗೆ ಆಗಮಿಸಿದ್ದ ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಪಿ. ಸಿ. ಜಾಫರ್ ಅಧಿವೇಶನದ ನಂತರ ಬೆಂಗಳೂರಿ ನಲ್ಲಿ ತಮ್ಮ ಜೊತೆ ಸಭೆ ಆಯೋಜಿಸಿ ನಿಮ್ಮ ವೇದಿಕೆಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸುತ್ತೇವೆ. ಆಗ ತಾವು ಬಂದು ತಮ್ಮ ಅಹವಾಲು ಮಂಡಿಸಿರಿ ಎಂದು ತಿಳಿಸಿದ್ದಲ್ಲದೇ ಸಚಿವ ಸತೀಶ ಜಾರಕಿಹೊಳಿ ರವರು ಸುವರ್ಣ ವಿಧಾನ ಸೌಧದಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿದಂತೆ ನಮ್ಮ ವೇದಿಕೆಯ ನಿಯೋಗವು ದಿನಾಂಕ 2024ರ ಡಿ.10 ರಂದು ಚಳಿಗಾಲದ ಅಧಿವೇಶನದ ಸಂದರ್ಭ ದಲ್ಲಿ ಭೇಟಿಯಾದಾಗ ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿರುತ್ತಾರೆ. ಆದರೆ ಈವರೆಗೂ ಸಭೆ ಏರ್ಪಾಡು ಮಾಡಿಲ್ಲ. ಸರ್ಕಾರ ತಕ್ಷಣ ನಮ್ಮಗಳ ಸಭೆ ಕರೆದು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರಾದ ಪುಟ್ಟರಾಜು, ಶಿವಾಜಿರಾವ್, ಮಠದ್ ಜ್ಞಾನೇಶ್ವರ್, ಕರಿಯಪ್ಪ, ಬಸವರಾಜ್, ಚಕ್ರಸಾಲಿ, ಯಶೋಧ,ಮಂಗಳ ಗೌರಮ್ಮ, ರಮಾಬಾಯಿ, ಕಾವೇರಿ, ಸುಮಿತ್ರಮ್ಮ ಮತ್ತಿತರರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು