ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹೊಳೆಹೊನ್ನೂರು ಸಮೀಪದ ಕೈಮರದ ಎನ್.ಡಿ. ಸುಂದರೇಶ್ ವೃತ್ತದಲ್ಲಿನ ಕೆನರಾ ಬ್ಯಾಂಕ್‌ನ ಎಟಿಎಮ್ ಸೇವೆ ಸ್ಥಗಿತಗೊಂಡು ಮೂರು ತಿಂಗಳು ಕಳೆದಿವೆ. ಆದರೂ ಇನ್ನೂ ಕೂಡ ಸೇವೆ ಆರಂಭಿಸಿಲ್ಲ.
ಎಟಿಎಮ್ ಸೌಲಭ್ಯ ದೊರೆಯದ ಕಾರಣ ಬ್ಯಾಂಕ್‌ನಲ್ಲಿ ಗ್ರಾಹಕರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಯೋ ವೃದ್ಧರು, ಅಂಗವಿಕಲರು, ಸಣ್ಣ ಮಕ್ಕಳ ತಂದೆ-ತಾಯಿಯರು ಬ್ಯಾಂಕ್‌ಗೆ ಬಂದು ಹಣ ಪಡೆಯಲು ಅಥವಾ ಕಟ್ಟಲು ಹರಸಾಹಸ ಪಡಬೇಕಾಗಿದೆ. 1 ಅಥವಾ 2 ಸಾವಿರ ಹಣವನ್ನು ತೆಗೆದುಕೊಳ್ಳುವವರೂ ಸಹ ಬ್ಯಾಂಕ್‌ನಲ್ಲಿಯೇ ಕಾಯಬೇಕಾಗಿದೆ.
ಇನ್ನೂ ಕೆಲವು ಹಿರಿಯ ನಾಗರೀಕರು ತಡವಾದಾಗ ಬ್ಯಾಂಕ್ ಸಿಬ್ಬಂದಿ ಗಳೊಂದಿಗೆ ವಾಗ್ವಾದಕ್ಕೂ ಇಳಿದಿರುವುದುಂಟು. ಇದರಿಂದ ಬ್ಯಾಂಕ್ ಸಿಬ್ಬಂದಿಗಳಿಗೂ ಕೂಡ ಕಿರಿಕಿರಿ ಉಂಟಾಗುತ್ತಿದೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ, ನಮ್ಮ ಶಾಖೆಯಲ್ಲಿ ಸುಮಾರು15 ಸಾವಿರ ಕ್ಕಿಂತ ಹೆಚ್ಚು ಖಾತೆಗಳಿವೆ. ಮೂರು ಜನ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದೇವೆ. ಹೀಗಾಗಿ ಜನರನ್ನು ನಿಯಂತ್ರಸುವುದು ಕಷ್ಟ. ಆದ್ದರಿಂದ ನಾವು ಈಗಾಗಲೇ ಬ್ಯಾಂಕ್‌ನ ಮುಖ್ಯ ಕಛೇರಿಗೆ ತಿಳಿಸಿದ್ದೇವೆ.
ಎಟಿಮ್ ಮಿಷನ್ ಕೆಟ್ಟು ತುಂಬಾ ದಿನಗಳಾಗಿವೆ. ಆದಷ್ಟು ಬೇಗ ರಿಪೇರಿ ಮಾಡಿಸಿ ಎಂದಿದ್ದೇವೆ. ಆದರೆ ಆ ಕಡೆಯಿಂದ ಸ್ಪಂದನೆ ಸಿಗುತ್ತಿಲ್ಲ. ಆ ಹಳೆಯ ಮಷಿನ್ ಕಂಪನಿಯು ಸೇವೆ ನೀಡುತ್ತಿಲ್ಲ. ಹೊಸ ಮೆಷಿನ್ ಕಳಿಸ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇದುವರೆಗೂ ಬಂದಿಲ್ಲ ಎಂದು ವ್ಯವಸ್ಥಾಪಕ ದೀಪಕ್ ಹೇಳಿದರು.