ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಇತ್ತೀಚಿನ ವರ್ಷಗಳಲ್ಲಿ ಮನುವಾದಿಗಳ ಸಂಸ್ಕೃತಿ ಹೆಚ್ಚಾಗಿದ್ದು ಮಹಾತ್ಮ ಗಾಂಧೀಜಿಯವರನ್ನು ಕೊಂದವ ರನ್ನು ಮಹಾನ್ ವ್ಯಕ್ತಿಗಳಂತೆ ಬಿಂಬಿಸುತ್ತಿರು ವುದು ವಿಪರ್ಯಾಸದ ಸಂಗತಿ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಹೇಳಿದರು.
ಗುರುವಾರ ನಗರದ ಫಿಲ್ಟರ್ ಶೆಡ್ಡಿ ನಲ್ಲಿನ ಅಂತರಘಟ್ಟಮ ಸಮುದಾಯ ಭವನ ಮುಂಭಾಗ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನ ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ತತ್ವ ಸಿದ್ಧಾಂತ ಗಳನ್ನು ವಿರೋಧ ಮಾಡುತ್ತಿರುವ ಸಂಖ್ಯೆ ದೇಶಾದ್ಯಂತ ಹೆಚ್ಚಾಗು ತ್ತಿರುವುದು ಖಂಡನೀಯ. ಮಹಾತ್ಮಾರ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಫಿಲ್ಟರ್ ಸೆಟ್ ನಾಗರಿಕ ಹಿತ ರಕ್ಷಣ ಸಮಿತಿಯ ಪದಾಧಿಕಾರಿಗಳಾದ ಮಾದೇವಿ ಪಾರ್ವತಿಬಾಯಿ ದಿವ್ಯಶ್ರೀ ಇಂದ್ರಮ್ಮ ಶಾಂತಮ್ಮ ಉಪಸ್ಥಿತರಿದ್ದರು.