ಸಕಾಲದಲ್ಲಿ ಕಣ್ಣುಗಳ ತಪಾಸಣೆ ಅಗತ್ಯ: ಡಾ:ದೀಪ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಕಣ್ಣುಗಳು ಮನುಷ್ಯನ ದೇಹದ ಪ್ರಮುಖ ಅಂಗ ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳು ವುದು ಅಗತ್ಯ. ನಮ್ಮ ಒತ್ತಡದ ಜೀವನದಲ್ಲಿ ಕಣ್ಣುಗಳನ್ನು ನಾವು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳು ವುದಿಲ್ಲ ಅದರಲ್ಲೂ ಮಧುಮೇಹ ಇರುವವರು ಕನಿಷ್ಠ ಆರು ತಿಂಗಳಿ ಗೊಮ್ಮೆ ಆದರೂ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಆದರ್ಶ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ಕಣ್ಣಿನ ವೈದ್ಯರಾದ ಡಾ:ದೀಪ ಎಂ.ಜೆ ಅಭಿಮತ ವ್ಯಕ್ತಪಡಿಸಿದರು.

ಅವರು ಶಿವಮೊಗ್ಗ ರೋಟರಿ ಕ್ಲಬ್ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಲ್ ಬಿ ಎಸ್ ನಗರದಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಸಾರ್ವಜನಿಕ ರಿಗೆ ಹಾಗೂ ಸದಸ್ಯರಿಗೆ ಆಯೋಜಿಸ ಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಆರೋಗ್ಯದ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಇತ್ತೀಚಿನ ಜೀವನ ಶೈಲಿ ಆರೋಗ್ಯ ಕ್ರಮ ಹಾಗೂ ಅಣುವಂಶಿಯತೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ ನಾವುಗಳು ಕಣ್ಣುಗಳನ್ನ ಸರಿಯಾಗಿ ಕಾಪಾಡಿಕೊಳ್ಳಬೇಕು ಎಂದು ನಾವು ಬಾಲ್ಯದಲ್ಲೇ ಮಕ್ಕಳಿಗೂ ಸಹ ಕಣ್ಣಿನ ತಪಾಸಣೆ ಮಾಡುವುದ ರಿಂದ ಮುಂದೆ ಆಗುವ ತೊಂದರೆ ಗಳನ್ನು ತಪ್ಪಿಸಬಹುದು ಎಂದ ಅವರು ಗ್ಲುಕೋಮಾದಂತ ಕಾಯಿಲೆಗಳನ್ನ ಬಾರದಂತೆ ನೋಡಿಕೊಳ್ಳಲು ಕಣ್ಣಿನ ಸಂರಕ್ಷಣೆ ಅಗತ್ಯ ಎಂದರು.

ವಿಶ್ರಾಂತ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಕೆ ಸೂರ್ಯ ನಾರಾಯಣ ಉಡುಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಸದಸ್ಯರಿಗೂ ಹಾಗೂ ಸಾರ್ವಜನಿಕರಿಗೆ ಡಾ. ದೀಪ ಎಮ್ ಜೆ ಅವರು ಕಣ್ಣಿನ ತಪಾಸಣೆ ನಡೆಸಿ. ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಷಾ ಏನ್ ಜಿ. ಪದಾಧಿಕಾರಿಗಳಾದ ಎನ್ ವಿ ಭಟ್, ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ. ಕಾರ್ಯದರ್ಶಿ ಶ್ರೀಕಾಂತ್. ಕಿಶೋರ್ ಶಿರ್ನಾಲಿ.ವಿಜಿ ಹೆಗಡೆ. ಗಾಯಿತ್ರಿ. ಸುಮತಿಂದ್ರ. ಹಾಗೂ ರೋಟರಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು