ಕರವೇ ಸ್ವಾಭಿಮಾನಿ ಬಣದಿಂದ ಸಂಕಷ್ಟ ಕುಟುಂಬಗಳಿಗೆ ಸಹಾಯ ಹಸ್ತ

ವಿಜಯ ಸಂಘರ್ಷ ನ್ಯೂಸ್ 

ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಎನ್.ಆನಂದ ಬ್ರಿಗೇಡ್ ವತಿಯಿಂದ ಇಂದಿರಾಗಾಂಧಿ ಬಡಾವಣೆ ನೂರು ಅಡಿ ರಸ್ತೆ ವಾಸವಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಹಾಗೂ ಆರ್ಥಿಕ ಸಹಾಯ ಮಾಡಲಾಯಿತು.

ಬಡಾವಣೆಯ ಲಲಿತ್ ಬೋರ ಹಾಗೂ ಪತ್ನಿ ಅಶ್ವಿನಿ ಬೋರಾ ಮಗ ಪ್ರಶಾಂತ್ ಬೋರ ಇವರ ಕುಟುಂಬಸ್ಥರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಸಮಸ್ಯೆಗೆ ಕರವೇ ಸ್ವಾಭಿಮಾನಿ ಬಣದ ಭೇಟಿ ಮಾಡಿ ಸಾಂತ್ವಾನ ಹಾಗೂ ಧೈರ್ಯ ತುಂಬಲಾಯಿತು.

ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡುವ ದಾನಿಗಳು ಅವರ ದೂರವಾಣಿ ಸಂಖ್ಯೆ 900 868 5482 ಹಾಗೂ 97 4078 8328 ಸಂಪರ್ಕಿ ಸಲು ಕರವೇ ಜಿಲ್ಲಾಧ್ಯಕ್ಷ ಕಿರಣ್ ವಿನಂತಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್ ಯು.ಕೆ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಗಣೇಶ್, ಕಾರ್ಯದರ್ಶಿ ರಾಮು,ಪ್ರಚಾರ ಸಮಿತಿಯ ಅಧ್ಯಕ್ಷ ಮಾಲ್ತೇಶ್, ಮುಖಂಡರಾದ ನೂರುಲ್ಲಾ ಖಾನ್ ಕೃಷ್ಣಪ್ಪ ಕವಿತಾ, ಮಾಲತಿ ಹಾಗು ಕಾರ್ಯಕರ್ತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು