ನಾಳೆಯಿಂದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ಯುವ ಮುಖಂಡ ಬಿ.ಎಸ್.ಬಸವೇಶ್ ಅವರ ಜನ್ಮದಿನದ ಅಂಗವಾಗಿ ನಗರದ ಓಂ ಕ್ರಿಕೆಟರ್ಸ್ ವತಿಯಿಂದ ಕೇಸರಿಪಡೆ ಸಂಘಟನೆಯ ಗಿರೀಶ್ ನೇತೃತ್ವದಲ್ಲಿ ಜ.10 ರಿಂದ 12ವರೆಗೆ ಹಳೇ ನಗರದ ಕನಕ ಮಂಟಪ ಮೈದಾನದಲ್ಲಿ ರಾಷ್ಟ್ರಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ.

ಪ್ರಥಮ ಬಹುಮಾನ 2.5 ಲಕ್ಷ, ರೂ,ದ್ವಿತೀಯ 1.5 ಲಕ್ಷ, ರೂ ಮತ್ತು ತೃತೀಯ 75 ಸಾವಿರ ರೂ ಬಹುಮಾನ ವಿದೆ. ಪ್ರತಿ ಪಂದ್ಯಕೂ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು.

ಅಂದಾಜು 200 ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸ ಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು