ಶಿವಮೊಗ್ಗ ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಿಸಲು ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಸರ್ಕಾರದ ಅನುದಾನ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು, ಸಂಸದರು, ಶಾಸಕರ ಅನುದಾನದಿಂದ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಶಿವಮೊಗ್ಗದಲ್ಲಿ ಪತ್ರಕರ್ತರಿಗೋಸ್ಕರ ನಿರ್ಮಾಣವಾದ ಪತ್ರಿಕಾಭವನ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರ ಖಾಸಗಿ ಸ್ವಂತ ಆಸ್ತಿಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್ ಆರೋಪಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪತ್ರಿಕಾ ಭವನದ ನಿರ್ವಹಣೆ ಪ್ರೆಸ್ ಟ್ರಸ್ಟ್ ಗೆ ಕೆಲವು ಒಪ್ಪಂದವನ್ನು ಮಾಡಿಕೊಂಡು ಜಿಲ್ಲಾಡಳಿತದಿಂದ ಬಿಟ್ಟು ಕೊಡಲಾಗಿತ್ತು. ಆದರೆ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿ ಗಳು ಪತ್ರಿಕಾ ಗೋಷ್ಠಿಯ ಆಯೋಜಕರಿಂದ ರೂ.2 ಸಾವಿರ ಹಾಗೂ ಪತ್ರಿಕಾ ಹೇಳಿಕೆ ಗಳಿಂದ ರೂ.150 ವಸೂಲಿ ಮಾಡಲಾಗುತ್ತಿದೆ. ಈ ಹಣದ ಲೆಕ್ಕಾಚಾರವನ್ನು ಇದುವರೆಗೆ ಜಿಲ್ಲಾಡಳಿತಕ್ಕಾಗಲೀ ಪತ್ರಕರ್ತರಿಗೆ ಆಗಲೀ ತೋರಿಸಿಲ್ಲ. ಇದರಿಂದ ತಿಂಗಳಿಗೆ ಸುಮಾರು 50 ಸಾವಿರ ರೂ ಸಂಗ್ರಹವಾಗುತ್ತಿದ್ದು, ಟ್ರಸ್ಟ್ ಇದುವರೆಗೂ ಹಣಕಾಸಿನ ಲೆಕ್ಕಾಚಾರ ನೀಡಿಲ್ಲ ಎಂದ ಅವರು ಕೂಡಲೇ ಪತ್ರಿಕಾ ಭವನಕ್ಕೆ ಜಿಲ್ಲಾಡಳಿತದಿಂದ ಆಡಳಿತಾಧಿಕಾರಿ ನೇಮಿಸುವಂತೆ ಒತ್ತಾಯಿಸಿದರು.

ಪತ್ರಿಕಾಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿ ಗಳಿಗೆ ಎಲ್ಲಾ ಪತ್ರಕರ್ತರು ಭಾಗವಹಿಸಲು ಬಿಡದೆ, ಪ್ರೆಸ್ ಟ್ರಸ್ಟ್ ನಿಂದ ಕೆಲವು ಗುಂಪು ಮಾಡಿ ಹಲವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಎಲ್ಲಾ ಸದಸ್ಯರಿಗೂ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು. ಗೋಷ್ಠಿ ಮತ್ತಿತರೆ ಮೂಲಗಳಿಂದ ಸಂಗ್ರಹ ವಾಗುವ ಹಣಕಾಸಿನ ಮಾಹಿತಿ ಪಡೆದು ಆ ಹಣವನ್ನು ಜಿಲ್ಲಾಢಳಿತಕ್ಕೆ ಅಥವಾ ಸರ್ಕಾರದ ಖಜಾನೆಗೆ ಪತ್ರಿಕಾಭವನ ದಿಂದ ಸಂಗ್ರಹವಾದ ಹಣವನ್ನು ಕೂಡಲೇ ಕಟ್ಟುವಂತೆ ಜಿಲ್ಲಾಧಿಕಾರಿ ಗಳು ಆದೇಶ ಮಾಡಬೇಕು.ಕೂಡಲೇ ತನಿಖೆ ನಡೆಸಿ ಸೂಕ್ತ ಕ್ತಮ ಕೈಗೊಳ್ಳ ಬೇಕು ಎಂಬುದೇ ಸಂಘಟನೆಯ ಸದಸ್ಯರ ಒತ್ತಾಸೆಯಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳ ದಿದ್ದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಘಟಕದ ಎಲ್ಲಾ ಪತ್ರಕರ್ತರು ಸದಸ್ಯರು ಸೇರಿ ಪ್ರೆಸ್ ಟ್ರಸ್ಟ್ ಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದ ಅವರು ಪ್ರತಿಯನ್ನು ಮುಖ್ಯಮಂತ್ರಿಗಳು,ಸಚಿವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿ ಕಾರಿಗಳಿಗೆ ಮನವಿ ಸಲ್ಲಿಸಿದರು. 

ಸಂಘಟನೆಯ ಕಾನೂನು ಸಲಹೆಗಾರ ಯು.ಎಸ್,ಷಡಾಕ್ಷರಪ್ಪ, ಉಪಾಧ್ಯಕ್ಷ ಚಿತ್ರಪ್ಪ ಯರಬಾಳ,ಕಾರ್ಯದರ್ಶಿ  ಕೃಷ್ಣ, ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ.ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ನಿರ್ದೆಶಕರಾದ ಹೆಚ್.ಎಸ್. ವಿಷ್ಣುಪ್ರಸಾದ್, ಗಿರೀಶ್ ಬಿ.ಸಿ, ಭರದ್ವಾಜ್, ಜಿ.ಆರ್, ಬಸವರಾಜ್, ಬಾಲಕೃಷ್ಣ ನಾಯಕ್, ಮಂಜಪ್ಪ, ರವಿ, ಮನೋಜ್ ಕಮಾರ್ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು