ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಸಿಂಗನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆ: 12 ರ ಬುಧವಾರ ಬೆಳಗ್ಗೆ 9 ಗಂಟೆ ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಭದ್ರಾ ಒಕ್ಕಲಿಗರ ಸಂಘದಲ್ಲಿ ಮಹಿಳೆ ಯರಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಬಿಪಿ, ಶುಗರ್, ಇ ಸಿ ಜಿ, ಕ್ಯಾನ್ಸರ್, ತಪಾಸಣೆ, ಸ್ತ್ರೀ ರೋಗಗಳು ಹಾಗೂ ಸಾಮಾನ್ಯ ಕಾಯಿಲೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಶಿಬಿರದಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ನ ಅನುಭವಿ ವೈದ್ಯರು ಆಗಮಿಸುತ್ತಿದ್ದು, ಮಹಿಳೆಯರು ಸಕಾಲಕ್ಕೆ ಅರೋಗ್ಯ ಶಿಬಿರಕ್ಕೆ ಆಗಮಿಸಿ ಶಿಬಿರದ ಪ್ರಯೋಜನ ಪಡೆದು ಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.