ತೀರ್ಥಹಳ್ಳಿ-ಮಹಿಳೆ ಕಾಣೆ ಪತ್ತೆಗೆ ಮನವಿ

ವಿಜಯ ಸಂಘರ್ಷ ನ್ಯೂಸ್ 
ತೀರ್ಥಹಳ್ಳಿ:ಆಗುಂಬೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮರಿಯಪ್ಪಗೌಡ ಎಂಬುವವರ ತಂಗಿ 60 ವರ್ಷದ ಯಶೋಧ ಬಿನ್ ನಾಗಪ್ಪಗೌಡ ಎಂಬುವವರು ದಿ-10-11-24 ರಂದು ಮನೆಯಿಂದ ಬೆಳಿಗ್ಗೆ 11 ಗಂಟೆಗೆ ಕಮ್ಮರಡಿಯ ಕರ್ನಾಟಕ ಬ್ಯಾಂಕ್‌ಗೆ ಹೋಗಿ ಬರುತ್ತೇನೆಂದು ಹೋದವರು ಈವರೆಗೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. 

ಈಕೆಯ ಚಹರೆ 5.3 ಅಡಿ ಎತ್ತರ, ಗೋಧಿ ಮೈ ಬಣ್ಣ, ಬೆಕ್ಕಿನ ಕಣ್ಣು, ತಲೆಯಲ್ಲಿ ಬಿಳಿ ಕೂದಲು ಹೊಂದಿರು ತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಸೀರೆ, ನೇರಳೆ ಬಣ್ಣದ ಬ್ಲೌಸ್ ಧರಿಸಿರುತ್ತಾರೆ. ಸ್ವಲ್ಪ ಬುದ್ದಿ ಮಾಂದ್ಯವಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. 

ಈ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.ಸಂ. : ಶಿವಮೊಗ್ಗ - 08182-261400/- ತೀರ್ಥಹಳ್ಳಿ :- 08181 - 220388 /ಮಾಳೂರು :- 9480803333/ ಆಗುಂಬೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು