ಕೆ.ಆರ್.ಪೇಟೆ-ನಟ ದರ್ಶನ್ ಅವರ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ:ಕನ್ನಡ ಚಲನಚಿತ್ರ ನಟ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಕೆ.ಆರ್.ಪೇಟೆ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿರುವ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣ ವಾಗಿ ಹುಟ್ಟುಹಬ್ಬ ಆಚರಿಸಿದರು.

ದರ್ಶನ್ ಅಭಿಮಾನಿ ಹಿರಿಕಳಲೆ ಮಧು ಮಾತನಾಡಿ ದರ್ಶನ್ ಅವರು ಒಬ್ಬ ಹೃದಯವಂತ ನೊಂದವರಿಗೆ ಧ್ವನಿಯಾಗಿ ನಿಲ್ಲುವ ಒಬ್ಬ ರಿಯಲ್ ಹೀರೋ ಹಾಗೂ ನಟನೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಅದ್ಭುತ ನಾಯಕ ನಟ ದರ್ಶನ್ ಅವರು ಶಾಶ್ವತವಾಗಿ ಅಭಿಮಾನಿಗಳ ಮನಸಿನಲ್ಲಿ ನೆಲೆಸಿದ್ದಾರೆ. ಸಮಾಜಕ್ಕೆ ನಿರಂತರ ಒಳಿತು ಬಯಸುವವರ ಹುಟ್ಟುಹಬ್ಬ ಆಚರಿಸುವುದು ಅಭಿಮಾನಿಗಳ ಆಧ್ಯ ಕರ್ತವ್ಯ ಹಾಗಾಗಿ ನಮ್ಮ ನೆಚ್ಚಿನ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಿ ದೂರ ಮುಕ್ತರಾಗಿ ಹೊರಬಂದು ನಿರಂತರವಾಗಿ ಕನ್ನಡ ಚಿತ್ರರಂಗದಲ್ಲೆ ನಟಿಸಬೇಕು ಎಂದು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಪ್ರಾರ್ಥಿಸಿ ತಾಲ್ಲೂಕು ಆಸ್ಪತ್ರೆ ಸಾರ್ವಜನಿಕರಿಗೆ ಹಣ್ಣು ಹಂಪಲು ಹಾಗೂ ರಕ್ತದಾನ ಶಿಬಿರ ಆಯೋಜಿಸಿ ಹುಟ್ಟುಹಬ್ಬದ ಆಚರಣೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯರಾದ ಡಾ: ಪ್ರಿಯಾಂಕಾ,ದರ್ಶನ್ ಅಭಿಮಾನಿಗಳಾದ ಹರಿ ಪ್ರಸಾದ್,ಮಧುಕರಣ್ ಹಿರೀಕಳಲೆ, ಅರುಣ್,ಶಿವು, ವಿಕಾಸ್,ಶಿವುಕುಮಾರ್, ಗಗನ್,ಭರತ್,ಯೋಗೇಶ್, ಚಂದ್ರು, ಸುಮಂತ,ರಾಜೇಶ್, ಪ್ರದೀಪ್,ಅಭಿಷೇಕ್, ಅನಿಲ್,ಯೋಗೇಶ್, ಸಾಗರ್,ಚಿರಂಜೀವಿ, ಕೌಶಿಕ್, ಕೀರ್ತಿ,ಯಶು,ಜಯಸಿಂಹ, ಮನೋಜ್,ಸುಮಂತ, ಜೀವನ್, ಪ್ರಶಾಂತ್, ದಿನೇಶ್,ಸುಹಾಸ್,ಗಿರೀಶ್, ಜಯಕೃಷ್ಣ, ದಿಲೀಪ್,ಚಿಂಗಾರಿ, ಸೇರಿದಂತೆ ನೂರಕ್ಕೂ ಹೆಚ್ಚು ಅಭಿಮಾನಿಗಳು ಇದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು