ಶಿಕ್ಷಣದ ಜೊತೆ ವ್ಯಾವಹಾರಿಕ ಜ್ಞಾನಕ್ಕೆ ಶಾಲಾ ಸಂತೆಯಂತಹ ಅವಕಾಶ ಬಳಕೆ ಅವಶ್ಯಕ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಮಕ್ಕಳು ಪ್ರಾಥಮಿಕ ಹಂತದಲ್ಲೆ ಗುಣಮಟ್ಟದ ಶಿಕ್ಷಣದ ಜೊತೆ ವ್ಯಾವಹಾರಿಕ ಜ್ಞಾನಕ್ಕೆ ಸಹಕಾರಿಯಾಗುವ ಶಾಲಾ ಸಂತೆ ಯಂತಹ ಅವಕಾಶಗಳನ್ನು ಮಕ್ಕಳು ಬಳಕೆ ಮಾಡಿಕೊಳ್ಳಬೇಕು ಎಂದು ಕ್ಷೆತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹೇಳಿದರು.

ತಾಲ್ಲೂಕಿನ ಚಿಕ್ಕಮಂದಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಜರುಗಿದ ಮಕ್ಕಳ ಸಂತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಪ್ರದೇಶ ದಲ್ಲಿ ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಉಳಿಯಲು ಇಂತಹ ಹಲವಾರು ಕಾರ್ಯಕ್ರಮ ಶಿಕ್ಷಕರು ರೂಪಿಸ ಬೇಕಿದೆ. ಕೇವಲ ಪಠ್ಯ ಸಾಕು ಎನ್ನದೆ ಪಠ್ಯೇತರ ಚಟುವಟಿಕೆಗಳಿಗೆ ಗಮನ ವಿರಲಿ. ಖುಷಿಯಿಂದ ಶಾಲೆಗೆ ಬರಲು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಿಕ್ಕಮಂದಗೆರೆ ಶಿವರಾಮು ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಯುವುದು ಬಹುಮುಖ್ಯವಾಗಿದೆ. ಅಂಗಡಿಗೆ ಕಳುಹಿಸಿದಾಗ ಅಗತ್ಯ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯ ವನ್ನು ಮಕ್ಕಳು ಹೆಚ್ಚಿಸಿಕೊಳ್ಳ ಬೇಕು. ಇಂತಹ ಮಕ್ಕಳ ಸಂತೆಗಳು ಪ್ರಾಯೋಗಿಕ ತರಬೇತಿಗಾಗಿ ಉತ್ತಮ ವೇದಿಕೆಯಾಗಿವೆ ಎಂದರು.

ಮಕ್ಕಳ ಸಂತೆಯಲ್ಲಿ ತರಕಾರಿ, ಸೊಪ್ಪು, ತೆಂಗಿನಕಾಯಿ, ತಿಂಡಿ-ತಿನಿಸು ಸೇರಿದಂತೆ ಹಲವಾರು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳ ನಡುವೆ ಪರಸ್ಪರ ಸ್ಪರ್ಧಾ ಮನೋ ಭಾವ ಪ್ರಚೋದಿತವಾಗಿದ್ದು, ತಮ್ಮ ಅಂಗಡಿಗಳ ಉತ್ಪನ್ನಗಳನ್ನು ಖರೀದಿ ಸಲು ಪೋಷಕರನ್ನು ಒತ್ತಾಯಿಸುವ ದೃಶ್ಯ ಗಮನಸೆಳೆಯಿತು.

ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯ ರಾಮೇಗೌಡ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಸ್ ಧರ್ಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್ ಮಂಜು,ರೈತಪರ ಹೋರಾಟಗಾರತಿ ನಂದಿನಿ ಜಯರಾಮು,ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಕೃಷ್ಣನಾಯಕ್ ಸಿ.ಆರ್‌.ಪಿ.ಜಯರಾಮ ಮತ್ತು ಶ್ರೀಕಾಂತರಾಜೆ ಅರಸ್ ಶಿಕ್ಷಕರಾದ ತಮ್ಮಯ್ಯ ವೀಣಾ ಕೆ.ಎಂ ರೇವತಿ ತ್ರಿವೇಣಿ ಪ್ರಕಾಶ್ ಅಣ್ಣಾಜಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಬೇಬಿ, ಸಹ ಶಿಕ್ಷಕರಾದ ರಾಜಪ್ಪ. ಟಿ ಗ್ರಾ. ಪಂ ಸದಸ್ಯೆ ನಿಂಗಮ್ಮ ಮಂಜೇಗೌಡ, ಶಾಲಾ ಎಸ್ ಡಿ ಎಂ ಸಿ ಸದಸ್ಯರು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು