ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ 2025-30 ವರೆಗಿನ ನೂತನ ಆಡಳಿತ ಮಂಡಳಿಗೆಮಂಡ್ಯದ ಮೈ ಶುಗರ್ ಶಾಲಾ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಕೆ.ಆರ್ ಪೇಟೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ನೀಡಿದ ತೀರ್ಪಿನಲ್ಲಿ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಶಾಸಕರಾದ ಹೆಚ್ ಟಿ ಮಂಜು 74 ಮತ ಪಡೆದು, ನಾಟನಹಳ್ಳಿ ಬೋರ್ವೆಲ್ ಮಹೇಶ್ 59 ಪಡೆದು ಸೋಲಾನುಭವಿಸಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ರಾಜಕಾರಣದ ಪ್ರತಿಷ್ಠೆ ಸವಾಲಿನಲ್ಲಿ ಲಗಾಮಿ ಇಲ್ಲದ ಸಲಗ ನಂತೆ ಕೆ.ರವಿ (ಡಾಲು ರವಿ)137 ಮತ ಹಾಗೂ ಎಂ.ಬಿ ಹರೀಶ್ 123 ಮತ ಪಡೆದುಕೊಂಡು ಭರ್ಜರಿ ಜಯಗಳಿಸಿದ್ದಾರೆ.
ಫಲಿತಾಂಶ ತಡೆ:-ಇನ್ನು ಮೈಷುಗರ್ ಶಾಲೆಯಲ್ಲಿ ನಡೆದ ಚುನಾವಣೆ ಬಳಿಕ ಮತ ಎಣಿಕೆ ಕಾರ್ಯ ನಡೆಸಲಾಯಿತು. ಆದರೆ ಕೆಲ ಪ್ರತಿನಿಧಿಗಳು ಫಲಿತಾಂಶದ ಬಗ್ಗೆ ನ್ಯಾಯಾಲಯದ ಮೊರೆಹೋದ ಪರಿಣಾಮ ಕೆ.ಆರ್. ಪೇಟೆ ತಾಲೂಕುಗಳ ಫಲಿತಾಂಶ ವನ್ನು ಅಧಿಕೃತವಾಗಿ ಘೋಷಿಸಲಿಲ್ಲ. ಫಲಿತಾಂಶದ ಮಾಹಿತಿಯನ್ನು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಸಲ್ಲಿಸ ಬೇಕಾಗಿರುವುದರಿಂದ ಫಲಿತಾಂಶ ವನ್ನು ಚುನಾವಣಾಧಿಕಾರಿ ಗಳು ತಡೆ ಹಿಡಿದಿದ್ದಾರೆ ಆದರೂ.
*ಅದ್ದೂರಿ ಸಂಭ್ರಮಾಚರಣೆ*
ಭರ್ಜರಿ ಜಯಗಳಿಸಿದ ಡಾಲು ರವಿ ಹಾಗೂ ಎಂ.ಬಿ ಹರೀಶ್ ಅವರು ಮೊದಲ ಬಾರಿಗೆ ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸುತ್ತಿದ್ದಂತೆ ರವರ ಬೆಂಬಲಿಗರು ಹಿತೈಷಿಗಳು ಅಭಿಮಾನಿ ಗಳು ಅಪಾರ ಸಂಖ್ಯೆಯಲ್ಲಿ ಡಾಲು ರವಿ ಅವರ ನಿವಾಸದ ಬಳಿ ಜಮಾಯಿಸಿ ಹಾರ ತುರಾಯಿ ಸಿಹಿ ಹಂಚಿ ಮುಗಿಲು ಮುಟ್ಟು ವಂತೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಲಾಯಿತು.
*ವಿಶ್ವಾಸದ ನುಡಿ* ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾಲು ರವಿ ಕಳೆದ ಎರಡು ಬಾರಿ ಮನ್ಮುಲ್ ಆಡಳಿತ ಮಂಡಳಿಯಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಸ್ವತಃ ರೈತನಾಗಿ ಹಾಲು ಉತ್ಪಾದಕರ ಸಂಕಷ್ಟವನ್ನೂ ಅರಿತಿದ್ದೇನೆ.ಸಿಕ್ಕ ಅಧಿಕಾರದ ಅವಧಿಯಲ್ಲಿ ನಾನು ಮತ್ತು ಎಂ.ಬಿ ಹರೀಶ್ ಎರಡು ಭಾರಿ ನಿರ್ದೇಶಕ ರಾಗಿ ಹಾಗೂ ಮೂರು ಭಾರಿ ಅಧ್ಯಕ್ಷರಾಗಿ ಉತ್ಪಾದಕರಿಗೆ ದೊರೆಯುವ ಎಲ್ಲ ಸೌಲಭ್ಯ ಗಳನ್ನೂ ಅರ್ಹ ಫಲನುಭಾವಿಗಳಿಗೆ ತಲುಪಿಸಿದ ಪ್ರಾಮಾಣಿಕ ಪ್ರಯತ್ನದ ಫಲಕ್ಕೆ ನಿರಂತರ ಮೂರನೇ ಬಾರಿಗೆ ನನ್ನನು ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್ ಅವರನ್ನ ಕೆ.ಆರ್ ಪೇಟೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಪ್ರತಿನಿಧಿಗಳು ಆಯ್ಕೆ ಮಾಡಿದ್ದಾರೆ ಇದು ನನ್ನ ಗೆಲುವಲ್ಲ ಸತ್ಯದ ಗೆಲುವು ನುಡಿದರು.
(✍️ಸುದ್ದಿಯೋದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags
ಕೆ.ಆರ್. ಪೇಟೆ ವರದಿ