ವಿಜಯ ಸಂಘರ್ಷ ನ್ಯೂಸ್
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಗಿ ಶಕೀಲ್ ಬಾಗಮಾರೆ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
ಕೆ.ಪಿ.ಸಿ.ಸಿ. ಸದಸ್ಯ ಅಬ್ದುಲ್ ಹಮೀದ ಮುಶ್ರೀಫ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರ ಚಿಂತನೆಯ ಪಕ್ಷವಾಗಿದ್ದು. ಪಕ್ಷ ಸಂಘಟನೆ ಒಂದು ಸರಳ ಕೆಲಸವಲ್ಲ ಅದು ಒಂದು ಜವಾಬ್ದಾರಿ ಕೆಲಸ. ಈ ಜವಾಬ್ದಾರಿಯನ್ನು ನೂತನ ಅಧ್ಯಕ್ಷರು ಯುವಕರಾಗಿದ್ದು ಸಮರ್ಥ ವಾಗಿ ನಿಭಾಯಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿ ಶುಭ ಕೋರಿದರು.
ನಿಕಟ ಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿ ಶಕೀಲ ಬಾಗಮಾರೆ ಯುವ ಪತ್ರಕರ್ತರಾಗಿದ್ದು ಇವರ ಮೇಲೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಪಕ್ಷ ಸಂಘಟನೆಗೆ ಅವಕಾಶ ನೀಡಿದೆ. ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಎಲ್ಲ ಕಾಂಗ್ರೆಸ್ ನಾಯಕರ ವಿಶ್ವಾಸವನ್ನು ಗಳಿಸುತ್ತಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಂಘಟಿಸುವಂತೆ ಸಲಹೆ ನೀಡಿ, ಮುಂಬರುವ ಬರುವ ತಾಲೂಕ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಸಂಘಟಿಸುವುದರೊಂದಿಗೆ,ಹಿಂದುಳಿದ ಹಾಗೂ ಎಲ್ಲ ಸಮಾಜದ ನಾಯಕರ ಜೊತೆ ಕೂಡಿ ಪಕ್ಷ ಸಂಘಟಣೆ ಮಾಡಬೇಕೆಂದರು.
ಕೆ.ಪಿ.ಸಿ.ಸಿ. ಉಪಾಧ್ಕಕ್ಷ ಉಸ್ಮಾನ್ ಪಟೇಲ್ ಕೊಲ್ಹಾರ, ಎಂ. ಸಿ.ಮುಲ್ಲಾ, ನಗರ ಬ್ಲಾಕ್ ಅಧ್ಯಕ್ಷ ಜಮೀರ ಬಕ್ಷಿ, ಜಿಲ್ಲಾ ಉಪಾಧ್ಯಕ್ಷ ಚಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಅಫ್ಜಲ ಜಾನವೇಕರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಝಾಕೀರಹುಸೇನ ಮುಲ್ಲಾ, ಎಂ. ಎಂ. ಮುಲ್ಲಾ, ದೇಸು ಚವ್ಹಾಣ, ವಸಂತ ಹೊನಮೋಡೆ, ದಿನೇಶ ಹಳ್ಳಿ, ಆಫ್ತಾಬಕಾದ್ರಿ ಇನಾಮದಾರ, ಇಲಿಯಾಸ್ ಸಿದ್ದೀಕಿ, ತಾಜುದ್ದೀನ ಖಲೀಫಾ, ಸುರೇಶ ಬಿಜಾಪೂರ, ಸದ್ದಾಂ ನಾಡೇವಾಲೆ, ಅಪ್ಪು ಪೂಜಾರಿ, ಝಾಕೀರ ಬಾಗವಾನ, ಮೈನುದ್ದೀನ ಬೀಳಗಿ, ಇದ್ರುಸ್ ಬಕ್ಷಿ, ಪೀರಾ ಜಮಖಂಡಿ, ಕುಲದೀಪಸಿಂಗ, ಗಂಗವ್ವ ಕಣಬಿಚನಾಳ, ಮಹಾದೇವಿ ಗೋಕಾಕ, ಕಾಶಿಬಾಯಿ ಹದಪದ, ಜಬ್ಬಾರ ಮುಲ್ಲಾ, ಕಲ್ಲಪ್ಪ ತಳವಾರ, ಅಬುಬಕರ ಕಂಬಾಗಿ, ಎಂ. ಎಸ್. ಮಣೂರ, ಫಿರೋಜ ಶೇಖ, ಮುನ್ನಾ ಬಕ್ಷಿ, ಬಿ.ಎಂ. ಮಕ್ತೇದಾರ, ಬಂದೇನವಾಜ ಜಮಾದಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Tags
ವಿಜಯಪುರ ವರದಿ